ಮೋದಿ ಅಡಳಿತದಲ್ಲಿ ತನಿಖಾಧಿಕಾರಿಗಳೇ ಅಪರಾಧಿಗಳು !

  • ಆಶಿಶ್ ಕೇತನ್

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸೊಹ್ರಾಬುದ್ದಿನ್, ಕೌಸರಬಿ, ಪ್ರಜಾಪತಿ ಹತ್ಯೆಯ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿ ಹಲವಾರು ಅರೋಪಗಳನ್ನು ಎದುರಿಸುತ್ತಾ ಸಿಬಿಐನಿಂದಲೇ ತನಿಖೆಗೊಳಗಾಗಿದ್ದಾರೆ. ಮಾಜಿ ತನಿಖಾಧಿಕಾರಿಯ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸಿದ್ಧಪಡಿಸಿ ಸಿಕ್ಕಿಹಾಕಿಸಲು ಸಿಬಿಐ ಹವಣಿಸುತ್ತಿದೆ.

2001ರ ಬ್ಯಾಚಿನ ಐಪಿಎಸ್ ಅಧಿಕಾರಿ ಸಂದೀಪ್ ತಾಂಗಾಡ್ಗೆ ನಾಗಾಲ್ಯಾಂಡ್ ಕ್ಯಾಡರಿಗೆ ಸೇರಿದವರಾಗಿದ್ದು ಅಕ್ಟೋಬರ್ 2011 ರಿಂದ 2015ರ ಅಕ್ಟೋಬರದವರೆಗೆ ಸಿಬಿಐನಲ್ಲಿ ಡೆಪ್ಯುಟೇಷನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. 2011ರಿಂದ 14ರ ಅವಧಿಯಲ್ಲಿ sಸಿಬಿಐ ಮುಂಬೈ ಶಾಖೆಯ ವಿಶೇಷ ಅಪರಾಧ ಶಾಖೆಯ ಎಸ್ ಪಿ ಆಗಿದ್ದ ಸಂದೀಪ್ ಅವರು ಸೊಹ್ರಾಬುದ್ದಿನ್, ಕೌ¸ರಬಿ ಮತ್ತು ತುಲಸಿರಾಂ ಪ್ರಜಾಪತಿಯವರ ಹತ್ಯೆಯ ತನಿಖೆ ನಡೆಸುತ್ತಿದ್ದರು. ಇಶ್ರತ್ ಜಹಾನ್ ಪ್ರಕರಣದಲ್ಲಿ ಸಂದೀಪ್ ಗುಜರಾತಿನ ಹಲವಾರು ಪೊಲೀಸ್ ಅಧಿಕಾರಿಗಳ ವಿರುದ್ಧ ಚಾರ್ಜ್ ಷೀಟ್ ಸಲ್ಲಿಸಿದ್ದರು. ಈ ಬಹು ಹತ್ಯೆಯ ಪ್ರಕರಣದಲ್ಲಿ ಬಿಜೆಪಿ ಹಾಲಿ ಅಧ್ಯಕ್ಷ ಅಮಿತ್ ಷಾ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಿದ್ದ ಸಂದೀಪ್ ತಾಂಗಾಡ್ಗೆ ಪ್ರಜಾಪತಿಯ ಹತ್ಯೆಯ ಪ್ರಕರಣದಲ್ಲಿ ಅಮಿತ್ ಷಾ ಅವರನ್ನೇ ಮುಖ್ಯ ಆರೋಪಿ ಎಂದು ಚಾರ್ಜ್ ಷೀಟಲ್ಲಿ ನಮೂದಿಸಿದ್ದರು.

ಹೀಗಿದ್ದರೂ ಸಹ ಸಿಬಿಐ 2014ರಲ್ಲಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮುನ್ನ ತಾಂಗಾಡ್ಗೆಯವರನ್ನು ತನಿಖೆಯಿಂದ ಹಿಂಪಡೆದಿತ್ತು. ಆ ವೇಳೆಗಾಗಲೇ ಅಭಿಪ್ರಾಯ ಸಂಗ್ರಹದ ಮೂಲಕ ಮೋದಿ ಪ್ರಧಾನಿಯಾಗುವುದು ನಿಶ್ಚಿತವಾಗಿತ್ತು. ಹಲವು ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿಹ್ನಾ ಅವಧಿಯಲ್ಲಿ ಸಂದೀಪ್ ಅವರನ್ನು ಉಚ್ಚಾಟಿಸಲಾಗಿತ್ತು. ಸಂದೀಪ್ ಅವರನ್ನು ಅವರ ಮೂಲ ಇಲಾಖೆಗೆ ವರ್ಗ ಮಾಡಿದ ನಂತರ ಅವರ ವಿರುದ್ಧ ಎರಡು ತನಿಖೆಗಳನ್ನು ನಡೆಸಲಾಗುತ್ತಿದೆ. ಎರಡೂ ಪ್ರಕರಣಗಳು ಗುಜರಾತ್ ಎನ್‍ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿಲ್ಲ.

ಒಂದು ಪ್ರಕರಣದಲ್ಲಿ ಸಂದೀಪ್ ಅವರನ್ನು ಅನಗತ್ಯವಾಗಿ ಸಿಕ್ಕಿಹಾಕಿಸಲು ಸಿಬಿಐ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಎರಡೂ ಪ್ರಕರಣಗಳಲ್ಲಿ ಸಿಬಿಐಗೆ ಸಂದೀಪ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ದೊರೆಯದಿದ್ದರೂ ಅಧಿಕಾರಿಯ ವಿರುದ್ಧ ಅಧಿಕಾರ ದುರುಪಯೋಗ, ಅಕ್ರಮ ಮುಂತಾದ ಆರೋಪಗಳನ್ನು ಹೊರಿಸುತ್ತಿದೆ. ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ಮೂರು ವರ್ಷಗಳ ಕಾಲ ತನಿಖಾಧಿಕಾರಿಯಾಗಿ ತನಿಖೆ ನಡೆಸಿದ ಸಂದೀಪ್ ತಾಂಗಾಡ್ಗೆಯನ್ನು ಸಿಬಿಐ ಸಂಪೂರ್ಣ ನಿರ್ಲಕ್ಷಿಸಿರುವುದು ಸರ್ಕಾರ ಮತ್ತು ಸಿಬಿಐ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹವಾಗಿಸಿದೆ.

 

LEAVE A REPLY