ಪೈವಳಿಕೆ ಗ್ರಾಮ ಪಂಚಾಯತ್ ಜಲನಿಧಿ ಯೋಜನೆಯಲ್ಲಿ ಅವ್ಯವಹಾರ ತನಿಖೆ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಪೈವಳಿಕೆ ಗ್ರಾಮ ಪಂಚಾಯತಿಯ ವಿವಿಧೆಡೆ ಕೈಗೊಂಡ ಜಲನಿಧಿ ಯೋಜನೆಯಲ್ಲಿ ನಡೆದ ವ್ಯಾಪಕ ಆವ್ಯವಹಾರದ ತನಿಖೆ ನಡೆಸುವಂತೆ ಕೇಂದ್ರ ವಿಜಿಲೆನ್ಸ್ ಅಧಿಕಾರಿಗಳು ಆದೇಶಿಸಿದ್ದಾರೆ
ಗ್ರಾಮ ಪಂಚಾಯತಿನ ವಿವಿಧೆಡೆ 12 ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ತನಿಖೆ ನಡೆಸುವಂತೆ ಕೇಂದ್ರ ವಿಜಿಲೆನ್ಸ್ ಇಲಾಖೆ ಕಾಸರಗೋಡು ವಿಜಿಲೆನ್ಸ್ ಅಧಿಕಾರಿಗಳಿಗೆ ಆದೇಶಿಸಿದೆ  ಫಲಾನುಭವಿಗಳಿಂದ ಹೇರಳ ನಿಧಿ ಸಂಗ್ರಹದ ಜೊತೆಗೆ ಕಳಪೆ ಕಾಮಗಾರಿ ನಡೆದಿರುವುದಾಗಿ ಸಾರ್ವಜನಿಕರು ದೂರು ಸಲ್ಲಿಸಿದ ಮೇರೆಗೆ ತನಿಖೆ ನಡೆಸಲಾಗುವುದು
ಒಟ್ಟು ರೂ 10 ಕೋಟಿ 14 ಲಕ್ಷದ ವಿವಿಧೆಡೆಯ 12 ಯೋಜನೆಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಫಲಾನುಭವಿ ಸಮಿತಿ ರಚಿಸಿ ಖಾಸಗಿ ವ್ಯಕ್ತಿಗಳು ಕಳಪೆ ಕಾಮಗಾರಿ ನಡೆಸಿ ಯೋಜನೆಯ ಹೆಚ್ಚಿನ ಮೊತ್ತವನ್ನು ಪಡೆದಿದ್ದು  ಇನ್ನೂ ಕೆಲವೆಡೆ ಫಲಾನುಭವಿಗಳಿಗೆ ನೀರಿನ ಪೂರೈಕೆಯಾಗಿಲ್ಲ  ಕಳೆದ ಎರಡು ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ತಿಯಾಗಬೇಕಿತ್ತು
ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆನ್ನೆಂಗಳ  ಪೆರ್ವಡಿ  ಮೇರ್ಕಳ ಪರಪ್ಪಿಲ್  ಗಾಳಿಯಡ್ಕ  ಚಿಪ್ಪಾರುಪದವು  ಕುಡಾಲುಮೇರ್ಕಳ  ಬೆರಿಪದವು ಕುರುಡಪದವು  ಪೈವಳಿಕೆ  ಪೆರ್ಮುದೆ  ಪೆಸಡಿಗುಂಪೆ ಮತ್ತು ಬದಿಯಾರು ಎಂಬ ಪ್ರದೇಶಗಳಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಸುಮಾರು 2,372 ಕುಟುಂಬಗಳಿಗೆ ಕುಡಿಯುವ ನೀರಿಗಾಗಿ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಹಿಂದಿನ ಮತ್ತು ಇಂದಿನ ಗ್ರಾಮ ಪಂಚಾಯತಿನ ಆಡಳಿತದ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆ ಮತ್ತು ನಿಧಾನ ಗತಿಯಲ್ಲಿ ಸಾಗಲು ಕಾರಣವೆಂಬುದಾಗಿ ಯೋಜನೆಯ ಫಲಾನುಭವಿಗಳು ಆರೋಪಿಸುತ್ತಿದ್ದಾರೆ