30 ಕೋಟಿ ರೂ ಚೆಕ್ ಹಗರಣ : ಬೆಂಗಳೂರಿಗೆ ವಿಸ್ತರಿಸಿದ ತನಿಖೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 30 ಕೋಟಿ 53 ಲಕ್ಷದ ಮೂರು ಸಾವಿರ ರೂ ಮೊತ್ತದ ನಕಲಿ ಚೆಕ್ ನ್ನು ಬ್ಯಾಂಕಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಗ್ರಾ ಪಂ ವ್ಯಾಪ್ತಿಯ ನಯಾಬಜಾರ್ ಇಂಡ್ಯನ್ ಗ್ಯಾಸ್ ಏಜನ್ಸಿ ಮಾಲಕಿ ಸನಿಲಳ ಪತಿ ಹಾಗೂ ಸಂಬಂಧಿಕರನ್ನು ಕರೆಸಿ ಮಂಜೇಶ್ವರ ಪೆÇಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಪೆÇಲೀಸರ ದೃಷ್ಟಿಯಲ್ಲಿ ಇದರಲ್ಲಿ ಭಾರೀ ಒಂದು ಹಗರಣ ಅಡಗಿದ್ದು, ಸರಕಾರಿ ಅಧಿಕಾರಿಗಳು ಕೂಡಾ ಈ ದಂಧೆಯಲ್ಲಿ ಶಾಮೀಲಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ತನಿಖೆಯನ್ನು ಬೆಂಗಳೂರಿಗೆ ವಿಸ್ತರಿಸಲು ಪೆÇಲೀಸರು ತೀರ್ಮಾನಿಸಿದ್ದಾರೆ. ಇದು ಸರಕಾರಿ ಇನ್ಸೂರೆನ್ಸ್ ಫಂಡ್ ಅಪಹರಿಸಿ ತೆಗೆಯಲು ಮಾಡಿದ ಒಂದು ತಂತ್ರವೆಂಬುದಾಗಿ ಪೆÇಲೀಸರು ಶಂಕಿಸಿದ್ದಾರೆ. ಪ್ರಕರಣದ ವಿಶೇಷ ತನಿಖೆಗಾಗಿ ಪ್ರತ್ಯೇಕ ಸ್ಕ್ವಾಡ್ ನೇಮಿಸಲಾಗಿದೆ.