ಪೊಲೀಸ್ ವರ್ಧಿಯಲ್ಲಿ ಪ್ರಿಯಾಂಕಾ ಉಪೇಂದ್ರ

`ಹೂವೇ ಹೂವೇ’ ಎಂದು ಮುಗ್ಧವಾಗಿ ಹೂಗಳನ್ನು ಕೊಯ್ಯುತ್ತಾ ಕನ್ನಡಿಗರಿಗೆ ಮೋಡಿ ಮಾಡಿ ಇಲ್ಲೇ ಸೆಟ್ಲ್ ಆಗಿರುವ ಉಪೇಂದ್ರನ ಮನೆ-ಮನದರಸಿ ಪ್ರಿಯಾಂಕಾ ಈಗ ಪೊಲೀಸ್ ವರ್ಧಿಯಲ್ಲಿ ರೋಲ್ ಕಾಲ್ ಮಾಡಲು ಸಜ್ಜಾಗಿದ್ದಾಳೆ. ಹೆಚ್ಚಾಗಿ ಗ್ಲಾಮರಸ್ ಪಾತ್ರದಲ್ಲಿಯೇ ಮಿಂಚುತ್ತಿದ್ದ ಪ್ರಿಯಾಂಕಾ ಉಪೇಂದ್ರ `ಮಮ್ಮಿ’ ಚಿತ್ರದ ಮೂಲಕ ತಾನು ಇಂತಹ ಪಾತ್ರದಲ್ಲಿಯೂ ನಟಿಸಬಲ್ಲೆ ಎಂದು ಪ್ರೇಕ್ಷಕರಿಗೆ ತೋರಿಸಿದಳು. ಮಹಿಳಾ ಪ್ರಧಾನ ಚಿತ್ರ `ಮಮ್ಮಿ’ಯ ಮೂಲಕ ಇಮೇಜ್ ಬದಲಿಸಿಕೊಂಡಿರುವ ಪ್ರಿಯಾಂಕಾ ಈಗ ಇನ್ನೊಂದು ಪವರ್ಫುಲ್ ರೋಲಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾಳೆ.

`ಸೆಕೆಂಡ್ ಹಾಫ್’ ಎನ್ನುವ ಚಿತ್ರದಲ್ಲಿ ಪ್ರಿಯಾಂಕಾ ಪೆÇಲೀಸ್ ಕಾನ್ಸ್ಟೇಬಲ್. ಸಾಮಾನ್ಯವಾಗಿ ಪೆÇಲೀಸ್ ಪಾತ್ರವೆಂದರೆ ಐಪಿಎಸ್, ಇನ್ಸ್‍ಪೆಕ್ಟರ್ ಪಾತ್ರಗಳಲ್ಲಿ ನಟಿಯರು ಅಭಿನಯಿಸುವುದು ಸಾಮಾನ್ಯ. ಆದರೆ, ಪ್ರಿಯಾಂಕಾ ಅದಕ್ಕೆ ವ್ಯತಿರಿಕ್ತವಾಗಿ ಪೆÇಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಮೊದಲ ಬಾರಿಗೆ ಪೊಲೀಸ್ ಗೆಟಪ್ಪಿನಲ್ಲಿ ತೆರೆಯ ಮೇಲೆ ಬರುತ್ತಿರುವುದಕ್ಕೆ ಪ್ರಿಯಾಂಕಾ ಎಕ್ಸೈಟ್ ಆಗಿದ್ದಾಳೆ. ಯೋಗಿ ಎನ್ನುವವರು ಈ ಸಿನಿಮಾದ ನಿರ್ದೇಶಕರಾಗಿದ್ದಾರೆ.