ಪತಿಯ ಅಣ್ಣನ ಮಗನ ಜೊತೆ ತೆರೆಹಂಚಿಕೊಂಡ ಪ್ರಿಯಾಂಕಾ

ಉಪೇಂದ್ರನ ಅಣ್ಣ ಸುಧೀಂದ್ರನ ಪುತ್ರ ನಿರಂಜನ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಮೊದಲ ಸಿನಿಮಾದಲ್ಲಿಯೇ ಆತನಿಗೆ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

ಪ್ರಿಯಾಂಕಾ `ಸೆಕೆಂಡ್ ಹಾಫ್’ ಚಿತ್ರದಲ್ಲಿ ನಟಿಸುತ್ತಿದ್ದು ಅದರಲ್ಲಿ ಆಕೆ ಪೆÇಲೀಸ್ ಕಾನ್ಸ್‍ಟೇಬಲ್ ಆಗಿ ಖಾಕಿ ಖದರಿನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಚಿತ್ರದಲ್ಲಿ ನಿರಂಜನ್ ಕೂಡಾ ಪಾತ್ರಧಾರಿ. ಆತ ಚಿಕ್ಕಮ್ಮನ ಜೊತೆ ಸ್ಕೂಟರಿನಲ್ಲಿ ಹೋಗುವ ಫೋಟೋ ಈಗ ಎಲ್ಲರ ಗಮನ ಸೆಳೆದಿದೆ.

ಈ ಚಿತ್ರವನ್ನು ಯೋಗಿ ನಿರ್ದೇಶನ ಮಾಡುತ್ತಿದ್ದಾರೆ.