ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಲಿರುವ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ತನ್ನ ಲುಕ್ ಬಗ್ಗೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆಕೆ ಯಾವಾಗಲೂ ಹಾಟ್ ಆಂಡ್ ಪಿಟ್ ಆಗಿಯೇ ಇರುತ್ತಾಳೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಗ್ಗಿ ಸಿಕ್ಸ್ ಪ್ಯಾಕ್ ಆಬ್ಸ್ ಹೊಂದಲು ಮುಂದಾಗಿದ್ದಾಳಂತೆ.

`ಕ್ವಾಂಟಿಕೋ’ ಸಿರೀಸಿನಿಂದ ಶುರುವಾದ ಪ್ರಿಯಾಂಕಾಳ ಹಾಲಿವುಡ್ ಜರ್ನಿ ಈಗ ಎಗ್ಗಿಲ್ಲದೇ ಸಾಗುತ್ತಿದೆ. ಆಕೆಯ ಮೊದಲ ಹಾಲಿವುಡ್ ಚಿತ್ರ `ಬೇವಾಚ್’ ಹೇಳುವಷ್ಟು ಹಿಟ್ ಆಗದಿದ್ದರೂ ಆಕೆಗೆ ಅಲ್ಲಿ ಅವಕಾಶಗಳು ಸಿಗುತ್ತಲೇ ಇವೆ. ಪಿಗ್ಗಿ ಈಗ `ಇಸಂಟ್ ಇಟ್ ರೊಮ್ಯಾಂಟಿಕ್’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು ಅದರಲ್ಲಿ ಆಕೆ ಯೋಗಾ ಟೀಚರ್ ಆಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಆ ಪಾತ್ರಕ್ಕಾಗಿ ಪ್ರಿಯಾಂಕಾ ಸಿಕ್ಸ್ ಪ್ಯಾಕ್ ಆಬ್ಸ್ ಹೊಂದಲು ಬಯಸಿದ್ದಾಳೆ. ಇದಕ್ಕಾಗಿ ಆಕೆ ಸಕತ್ ವರ್ಕೌಟ್ ಮಾಡುತ್ತಿದ್ದಾಳಂತೆ. ಜತೆಗೆ ಸ್ಟ್ರಿಕ್ಟ್ ಡಯಟ್ ಕೂಡಾ ಪಿಗ್ಗಿ ಪಾಲಿಸುತ್ತಿದ್ದಾಳೆ.

ಅಂತೂ ಬಾಲಿವುಡ್ ಕೆಲವು ಹೀರೋಗಳಂತೆ ಈಗ ಪಿಗ್ಗಿ ಕೂಡಾ ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಲಿದ್ದಾಳೆ. ಇದು ನಮ್ಮ ಕೆಲವು ನಟೀಮಣಿಯರಿಗೂ ಸ್ಪೂರ್ತಿ ನೀಡಬಹುದು.