ಇದು ಪಿಗ್ಗಿ ಹೊಸ ಸ್ಟೈಲ್

ಪ್ರಿಯಾಂಕಾ ಚೋಪ್ರಾ ಸದ್ಯ ಯಾವ ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದಿದ್ದರೂ ಆಕೆ ಒಂದಿಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾಳೆ. ಈಕೆ ಈಗ ನ್ಯೂಯಾರ್ಕಿನ ಮ್ಯಾಗಸೀನ್ ಒಂದಕ್ಕೆ ಫೊಟೋಶೂಟ್ ಮಾಡಿಸಿಕೊಂಡಿದ್ದು ಆಕೆಯ ವಿಭಿನ್ನ ಅವತಾರಗಳು ಹೊರಬಿದ್ದಿವೆ. ಅಂದ ಹಾಗೆ ಈ ಮ್ಯಾಗಸೀನ್ ಆರು ಬ್ಯೂಟಿಫುಲ್ ವ್ಯಕ್ತಿಗಳ ಬಗ್ಗೆ ಫೀಚರ್ ಮಾಡಿದ್ದು ಅದರಲ್ಲಿ ಪಿಗ್ಗಿ ಕೂಡಾ ಒಬ್ಬಳು.

ಈ ಮ್ಯಾಗಸೀನಿನ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪ್ರಿಯಾಂಕಾ “ನನಗೆ ಡೆಸ್ಟಿನಿ ಬಗ್ಗೆ ಬಹಳ ನಂಬಿಕೆ ಇದೆ. ಏನು ಆಗಬೇಕೆಂದು ನಮ್ಮ ಹಣೆಯಲ್ಲಿ ಬರೆದಿರುತ್ತೋ ಹಾಗೇ ಆಗುತ್ತದೆ. ಕಲವೊಮ್ಮೆ ನಾವು ಬಯಸಿದ್ದು ಆಗಿಲ್ಲ ಎಂದು ಕೊಂಡರೂ ನಮಗೆ ಬೇಕಾಗಿದ್ದು ಆಗಿರುತ್ತದೆ. ನಾವದನ್ನು ಅರ್ಥಮಾಡಿಕೊಂಡು ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡರೆ ಜೀವನ ಸೊಗಸಾಗಿರುತ್ತದೆ” ಎಂದಿದ್ದಾಳೆ.