`ಕಳೆದ ವರ್ಷದವರೆಗೆ ಸೀರಿಯಸ್ ಸಂಬಂಧದಲ್ಲಿದ್ದೆ’ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ಡಿನಲ್ಲಿಯೂ ತನ್ನ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ಕಳೆದ ವಾರ `ಫಿಲ್ಮ್ ಫೇರ್’ ಮ್ಯಾಗಸೀನ್ ಜೊತೆಗಿನ ಸಂದರ್ಶನದಲ್ಲಿ ಆಕೆ ಕೆಲವು ವೈಯಕ್ತಿಕ ಪ್ರಶ್ನೆಗಳಿಗೂ ಉತ್ತರವಿತ್ತಿದ್ದಾಳೆ.

ಪ್ರಿಯಾಂಕಾ ಬಳಿ ಸಂದರ್ಶಕರು `ಸದ್ಯ ಯಾರಾದರೂ ಇಂಟರೆಸ್ಟಿಂಗ್ ವ್ಯಕ್ತಿ ನಿಮ್ಮ ಬಾಳಿನಲ್ಲಿ ಬಂದಿರುವರಾ’ ಎಂದು ಕೇಳಲಾದ ಪ್ರಶ್ನೆಗೆ ಪ್ರಿಯಾಂಕಾ “ ಕಳೆದ ವರ್ಷದವರೆಗೆ ನಾನು ಬದ್ಧತೆಯಿರುವ ಸಂಬಂಧದಲ್ಲಿದ್ದೆ. ಆದರೆ ಅದು ಅರ್ಥಪೂರ್ಣವಾಗಿ ಕೊನೆಗೊಂಡಿಲ್ಲ. ಸದ್ಯಕ್ಕೆ ನಾನು ಸಿಂಗಲ್. ಹಾಗೇ ಕೆಲವರು ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ” ಎಂದಿದ್ದಾಳೆ. ಪ್ರಿಯಾಂಕಾ ಅಮೆರಿಕಾದಲ್ಲಿ ಒಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಳು ಎನ್ನುವ ಸುದ್ದಿಯನ್ನೀಗ ಒಪ್ಪಿಕೊಂಡಿದ್ದಾಳೆ. ಪ್ರಿಯಾಂಕಾ ಮತ್ತೂ ಮುಂದುವರಿದು “ನನಗೆ ಈಗಲೂ ಬಹಳಷ್ಟು ಅಟೆನ್ಷನ್ ಸಿಗುತ್ತಿದೆ. ಆದರೆ ಅದರಿಂದ ಏನು ಮಾಡಬೇಕೋ ಗೊತ್ತಿಲ್ಲ” ಎನ್ನುತ್ತಾಳೆ. ಈ ಮೊದಲು ಪ್ರಿಯಾಂಕಾ ಹೆಸರು ಅಕ್ಷಯ್ ಕುಮಾರ್, ಶಾರೂಕ್ ಖಾನ್, ಶಾಹೀದ್ ಕಪೂರ್ ಜೊತೆ ಕೇಳಿಬಂದಿತ್ತು.

ಸದ್ಯ ಪ್ರಿಯಾಂಕಾ `ಕ್ವಾಂಟಿಕೋ’ ಸೀರಿಯಲ್ ಮುಂದುವರಿದ ಭಾಗ ಹಾಗೂ `ಎ ಕಿಡ್ ಲೈಕ್ ಜೇಕ್’ ಎನ್ನುವ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ.

LEAVE A REPLY