ನ್ಯೂಯಾರ್ಕಿನಲ್ಲಿ `ಡಯಾನಾ’ ಜೊತೆ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾಳಿಗೆ ಈಗ ಅಮೆರಿಕಾ ಎನ್ನುವುದು ಎರಡನೇ ಹೋಮ್ ಟೌನ್ ಆಗಿರುವುದು ಗೊತ್ತೇ ಇದೆ. ಅಮೆರಿಕಾದಲ್ಲಿ ಆಕೆಯ ಫೇವರಿಟ್ ಪಾಸ್ ಟೈಮ್ ಏನು ಗೊತ್ತಾ? ಸಮಯ ಸಿಕ್ಕಾಗೆಲ್ಲ ತನ್ನ ಮುದ್ದಿನ ನಾಯಿ ಮರಿ ಡಯಾನಾ ಜೊತೆ ಆಟವಾಡುವುದು … ಮೊನ್ನೆ ನ್ಯೂಯಾರ್ಕ್ ಸಿಟಿಯಲ್ಲಿ ಬಣ್ಣ ಬಣ್ಣದ ಗೆರೆಯುಳ್ಳ ರಾತ್ರಿಯುಡುಪಿನ ರೀತಿಯ ದೊಗಲೆ ಪ್ಯಾಂಟ್, ಶರ್ಟ್ ಧರಿಸಿ ಪ್ರಿಯಾಂಕಾ ತನ್ನ ನಾಯಿಮರಿಯನ್ನು ಎದೆಗವಚಿಕೊಂಡು ಹೋಗುತ್ತಿರುವುದು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಪ್ರಿಯಾಂಕಾ ಈಗ ಅಮೆರಿಕಾದಲ್ಲಿ ಭಾರೀ ಪೇಮಸ್. ಆಕೆ ಈ ವಾರ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪೆದಿದ್ದಾಳೆ. ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣಾ ಕಂಪನಿ ಎಂ.ವಿ.ಪಿಂಡೇಕ್ಸ್ ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ವಾರಕ್ಕೊಮ್ಮೆ ಈ ಟಾಪ್ ಆಕ್ಟರ್ಸ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಸಾಮಾಜಿಕ ತಾಣಗಳಾದ ಫೇಸ್ ಬುಕ್, ಇನ್ಸ್ಟಾ ಗ್ರಾಮ್, ಟ್ವೀಟರ್, ಯ್ಯೂಟುಬ್ ಹಾಗೂ ಗೂಗಲ್ ಪ್ಲಸ್‍ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟ, ನಟಿಯರನ್ನು ಟಾಪ್ ಆಕ್ಟರ್ಸ್ ಪಟ್ಟಿಗೆ ಆಯ್ಕೆ ಮಾಡುತ್ತಾರೆ.

ಇನ್ನು ಪ್ರಿಯಾಂಕಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲು ಬಯಸಿರುವ `ಗುಸ್ತಾಕಿಯಾ’ ಚಿತ್ರಕ್ಕೂ ಸಹಿ ಹಾಕಿದ್ದಾಳೆ ಎನ್ನುವ ಸುದ್ದಿ ಇದೆ. ಅದಲ್ಲದೇ ಇನ್ನೆರಡು ಹಾಲಿವುಡ್ ಪ್ರಾಜೆಕ್ಟಿನ ಬಗ್ಗೆಯೂ ಆಕೆ ಮಾತುಕತೆ ನಡೆಸುತ್ತಿದ್ದಾಳೆ. ಕಳೆದ ವಾರ ಯೂರೋಪಿನ ಪ್ರಾಗ್‍ನಲ್ಲಿ ಹಾಲಿಡೇ ಮಜಾ ಅನುಭವಿಸಿ ಬಂದಿರುವ ಪಿಗ್ಗಿ ಈಗ ಇಂಟರ್ನಾಷನಲ್ ಹಕ್ಕಿಯಾಗಿಬಿಟ್ಟಿದ್ದಾಳೆ.