ಕರಣ್ ಪೋಲಿ ಪ್ರಶ್ನೆಗೆ ಪಿಗ್ಗಿ ಬೋಲ್ಡ್ ಉತ್ತರ

ಕರಣ್ ಜೋಹರ್ ತಾನು ನಡೆಸಿಕೊಡುತ್ತಿರುವ `ಕಾಫಿ ವಿಥ್ ಕರಣ್’ ಶೋನಲ್ಲಿ ಎಂತೆಂಥಾ ಪೋಲಿ ಪ್ರಶ್ನೆ ಕೇಳುತ್ತಾನೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಕರಣ್ ಜೋಹರ್ ಈ ಶೋದಲ್ಲಿ ಭಾಗವಹಿಸಿದ್ದಳು. ಈ ವೇಳೆ ಕರಣ್ ಪ್ರಿಯಾಂಕಾಳಲ್ಲಿ ತೀರ ಪರ್ಸನಲ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಪಿಗ್ಗಿಯೂ ಯಾವುದೇ ಎಗ್ಗಿಲ್ಲದೇ ಬೋಲ್ಡ್ ಆಗಿ ಉತ್ತರಿಸಿದ್ದಾಳೆ.
ಯಾವಾಗಲೂ ತನ್ನ ಶೋಗೆ ಬಂದಿರುವ ಅತಿಥಿಗಳ ಕಾಲೆಳೆಯುವುದರಲ್ಲಿ ನಿಸ್ಸೀಮನಾದ ಕರಣ್, ಪ್ರಿಯಾಂಕಾಳಿಗೆ ಕೆಲವು ಸೆಕ್ಸೀ ಪ್ರಶ್ನೆಗಳನ್ನು ಕೇಳಿದ್ದಾನೆ. ಕರಣ್ ಪ್ರಿಯಾಂಕಾಳಲ್ಲಿ “ನೀವು ಯಾವತ್ತಾದರೂ ಲೈಟ್ ಉರಿಸಿ ಸೆಕ್ಸ್ ಮಾಡಿದ್ದೀರಾ? ಬ್ರೇಕಪ್ ಆದ ಮೇಲೆ ಯಾವುದಾದರೂ ಬಾಯ್‍ಫ್ರೆಂಡಿಗೆ ಕಿಸ್ ಮಾಡಿದ್ದೀರಾ? ಯಾವಾಗಲಾದರೂ ಬಾತ್‍ರೂಂನಲ್ಲಿ ಬೇರೆಯವರ ಜೊತೆ ಸ್ನಾನ ಮಾಡಿದ್ದೀರಾ? ಯಾವತ್ತಾದರೂ ಫೆÇೀನ್ ಸೆಕ್ಸ್ ಮಾಡಿದ್ದೀರಾ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೆಲ್ಲದಕ್ಕೂ ಪ್ರಿಯಾಂಕ `ಹೌದು’ ಎಂದು ಉತ್ತರಿಸಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಹೀಗೆ ಬೋಲ್ಡ್ ಆಗಿ ಉತ್ತರಿಸಿದ ನಂತರ ಅದೇನೆನಿಸಿತೋ ಸ್ವಲ್ಪ ಮುಜುಗರದಿಂದಲೇ ಪ್ರಿಯಾಂಕಾ `ಈ ಶೋವನ್ನು ನನ್ನ ತಾಯಿ ನೋಡದಿದ್ರೆ ಒಳ್ಳೆಯದು. ಒಂದು ವೇಳೆ ನೋಡಿದ್ರೆ ನನಗೆ ಕಷ್ಟ’ ಎಂದೂ ಹೇಳಿದ್ದಾಳೆ.