ಸದ್ಯವೇ ಕೈದಿಗಳ ಕಲಾ ಪ್ರದರ್ಶನ

ಬೆಂಗಳೂರು : ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ರಾಜ್ಯಾದ್ಯಂತದ ಜೈಲಿನಲ್ಲಿರುವ ಕೈದಿಗಳು ರಚಿಸಿದ ಕಲಾ ಕೆಲಸಗಳ ಪ್ರದರ್ಶನ ನಡೆಯಲಿದೆ. ಕೈದಿಗಳು ಜನಸಾಮಾನ್ಯರ ದೃಷ್ಟಿಯಿಂದ ದೂರವಾದ ಬಳಿಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ಕಲೆಯನ್ನು ಬಳಸಿಕೊಂಡಿದ್ದಾರೆ.

ಈ ಹಿಂದೆ ಮೈಸೂರು ಜೈಲಿನಲ್ಲಿದ್ದ ಕೈದಿಗಳ ಕಲಾ ಕೆಲಸಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಕೆಲವು ಕಲಾಕೌಶಲ್ಯಗಳು ಪ್ರದರ್ಶನಗೊಂಡಿದ್ದು, ಅವರ ಕೆಲಸಗಳಿಗೆ ಉತ್ತಮವಾದ ಪ್ರಶಂಸೆಗಳು ದೊರೆತಿವೆ.

“ಇದೀಗ ನಾವು ರಾಜ್ಯಮಟ್ಟದ ಪ್ರದರ್ಶನವನ್ನು ಕಾಣಲು ಬಯಸಿದ್ದೇವೆ. ರಾಜ್ಯಮಟ್ಟದ ಪ್ರದರ್ಶನದಿಂದ ಹೆಚ್ಚು ಗುರುತಿಸಲ್ಪಡುತ್ತೇವೆ. ಪ್ರದರ್ಶನ ಎಲ್ಲಿ ಮತ್ತು ಯಾವಾಗ ಎಂಬುದು ಇನ್ನೂ ನಿರ್ಧರಿಸಲ್ಪಟ್ಟಿಲ್ಲ. ಆದರೆ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದ್ದು, 2017ರ ಪ್ರಾರಂಭದಲ್ಲಿ ನಡೆಯಲಿದೆ” ಎಂದು ಡಿಜಿಪಿ ಹೆಚ್ ಎನ್ ಎಸ್ ರಾವ್ ಹೇಳಿದ್ದಾರೆ.

ಚಿತ್ರಕಲೆಗಳು ವಿವಿಧ ವಿಷಯಗಳನ್ನೊಳಗೊಂಡಿದ್ದು, ಕೈದಿಗಳ ಭಾವನೆಗಳನ್ನು ಮತ್ತು ಮನಸ್ಸನ್ನು ಅಭಿವ್ಯಕ್ತಪಡಿಸುತ್ತದೆ. ಕಲಾಚಿತ್ರಗಳ ಜೊತೆಗೆ ಅದನ್ನು ರಚಿಸಿದ ಕೈದಿಗಳ ಹೆಸರು ಮತ್ತು ಭಾವಚಿತ್ರ ಪ್ರದರ್ಶನಗೊಳ್ಳಲಿದೆ.

“ಬೆಳಗಾವಿ ಹಿಂಡಲ್ಗಾ ಜೈಲು, ವಿಜಯಪುರ ಜೈಲು, ಮೈಸೂರು ಕೇಂದ್ರ ಕಾರಾಗೃಹ ಮತ್ತು ಇತರ ಕಾರಾಗೃಹಗಳ ಕೈದಿಗಳ ಚಿತ್ರಕಲಾ ಪ್ರದರ್ಶನಕ್ಕೆ ಆಹ್ವಾನವಿದೆ. ಕೆಲವು ಕೈದಿಗಳಿಗೆ ಕಲೆಯ ಬಗ್ಗೆ ಹಿಂದೆಯೇ ಅನುಭವಗಳಿವೆ. ಅವರು ತಮ್ಮ ಕಲೆಗಳನ್ನು ಉತ್ತಮವಾಗಿ ಪ್ರದರ್ಶಿಸಲಿದ್ದಾರೆ. ಜೈಲಿನಲ್ಲಿರುವ ಖೈದಿಗಳು ಅನೇಕ ಉತ್ಪಾದನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹ ಚಟುವಟಿಕೆಗಳಲ್ಲಿ ಇದೂ ಒಂದು” ಎಂದು ರಾವ್ ಹೇಳಿದ್ದಾರೆ.