ಕೈದಿಗಳ ಮೇಲೆ ಪೊಲೀಸ್ ಅಧಿಕಾರಿಗಳಿಂದ ಜಾತಿನಿಂದನೆ ದೂರು ನೀಡಲು ನಿರ್ಧಾರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಮೇಲೆ ಸಿಸಿಬಿ ಇನ್‍ಸ್ಪೆಕ್ಟರ್ ಶಾಂತರಾಮ್, ಎಸಿಪಿ ವೆಲೆಂಟೆನ್ ಡಿಸೋಜ ಅವರು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಶರ್ಫುದ್ದೀನ್ ಎಂಬವರು ಮಂಗಳೂರು ನಗರ ಪೊಲೀಸ್ ಕಮಿಷನರಗೆ ದೂರು ನೀಡಲಿದ್ದಾರೆ.

ಜನವರಿ 8ರಂದು ಸಂಜೆ 4.30ಕ್ಕೆ ಕಾರಾಗೃಹದಲ್ಲಿನ ಕೈದಿಗಳ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಬಳಿಕ ಕಾರಾಗೃಹದಲ್ಲಿದ್ದ ಪೊಲೀಸರ ಸಕಾಲಿಕ ಕಾರ್ಯಾಚರಣೆ ಮೂಲಕ ನಿಯಂತ್ರಿಸಲಾಗಿತ್ತು. ಅದೇ ದಿನ ಸಂಜೆ 7.30ಕ್ಕೆ ಕಾರಾಗೃಹಕ್ಕೆ ಭೇಟಿ ನೀಡಿದ ಶಾಂತರಾಮ್ ಮತ್ತು ವೆಲೆಂಟೆನ್ ಡಿಸೋಜ, ಬಜಪೆ ಕೇಸಿನಲ್ಲಿ ಕೋರ್ಟಿಗೆ ಹಾಜರಾದವರು ಯಾರು ಎಂದು ಕೇಳಿ ಇರ್ಷಾದ್ ಬಜ್ಪೆ, ನವಾಝ್ ಮಂಗಳೂರು, ಮುಸ್ತಾಫಾ ಪೋರ್ಕೋಡಿ ಎಂಬವರನ್ನು ಪ್ರತ್ಯೇಕವಾಗಿ ಕರೆದು ಅವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. “ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ನವಾಝ್ ಸಹೋದರ ಶರ್ಫುದ್ದೀನ್ ಅವರು ಕಮಿಷನರ್, ಗೃಹ ಸಚಿವರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

 

LEAVE A REPLY