ವಿದ್ಯಾರ್ಥಿಗಳಿಗೆ ಸೆಕ್ಸ್ ಶೋಷಣೆ : ಪ್ರಿನ್ಸಿಪಾಲ ವಿರುದ್ಧ ಕೇಸು ದಾಖಲು

ಬೋಪಾಲ : ಮಧ್ಯಪ್ರದೇಶದ ವಸತಿ ಬಾಲಕರ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲ ಲೈಂಗಿಕ ಶೋಷಣೆಗೊಳಪಡಿಸಿದ ದೃಶ್ಯಗಳು ವೀಡಿಯೋದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಪ್ರಾಂಶುಪಾಲನ ವಿರುದ್ಧ ಭಾರೀ ಪ್ರತಿಭಟನೆ ಕಂಡು ಬಂದಿದೆ.

ಛತರ್‍ಪುರ ಜಿಲ್ಲೆಯ ಹಲ್ಪರ್ಪುರದ ವಸತಿ ಶಾಲೆಯಲ್ಲಿ 15 ದಿನದ ಹಿಂದೆ ಈ ಘಟನೆ ನಡೆದಿತ್ತು. ಈ ಬಗ್ಗೆ ಕೆಲವರು ದಾಖಲಿಸಿಕೊಂಡಿರುವ ವೀಡಿಯೋ ಬಿಡುಗಡೆ ಬಳಿಕ ಹೇಯ ಕೃತ್ಯ ಬಯಲಾಗಿದೆ.

ವಿದ್ಯಾರ್ಥಿಗಳನ್ನು ಲೈಂಗಿಕ ಶೋಷಣೆಗೆ ಗಿರುಪಡಿಸುತ್ತಿದ್ದ ಪ್ರಾಂಶುಪಾಲನಿಗೆ ಸರಿಯಾದ ಪಾಠ ಕಲಿಸಲೆಂದೇ ಶಾಲೆಯ ಸಹಪಾಠಿಗಳು ವೀಡಿಯೋ ಚಿತ್ರೀಕರಣ ನಡೆಸಿದ್ದರು. ಪೊಲೀಸರು ಆ ವೀಡಿಯೋ ವಶಪಡಿಸಿಕೊಂಡಿದ್ದಾರೆ.

“ಗಂಗಾ ಪ್ರಸಾದ್ ಪ್ರೌಢ ಶಾಲೆಯ ಪ್ರಾಂಶುಪಾಲ ಶ್ಯಾಮಕಾಂತ್ ಶರ್ಮನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆ ಹೇರಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮಧ್ಯೆ ಆರೋಪಿ ಪ್ರಾಂಶುಪಾಲ ತಲೆಮರೆಸಿಕೊಂಡಿದ್ದಾನೆ. ಈತ ಇನ್ನೂ ಹಲವರೊಂದಿಗೆ ಇಂತಹ ಅನೈತಿಕ ವ್ವಹಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳು ದೂರಿಕೊಂಡಾಗ ಪೊಲೀಸರು ನಿಷ್ಕ್ರಿಯರಾಗಿದ್ದರು. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು, ಪ್ರಾಂಶುಪಾಲನ ಕುಕೃತ್ಯವನ್ನು ವೀಡಿಯೋ ಮಾಡಿ ಬಿಡುಗಡೆಗೊಳಿಸಿದ್ದಾರೆ.