ಮನೆ ಮದ್ದು ಮಾಡುವವರು ಆಯುರ್ವೇದ ಔಷಧಿಯ ಬೆಲೆ ಕೇಳಿದರೆ ಚಕಿತರಾಗುತ್ತಾರೆ

ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧಿಗೆ ಜನರು ಹೆಚ್ಚೆಚ್ಚು ಮಾರುಹೋಗುತ್ತಿದ್ದಾರೆ ಆಧುನಿಕ ಔಷಧಿಗಳ ಅಡ್ಡ ಪರಿಣಾಮದಿಂದ ಬೇಸತ್ತ ಜನರು ಆಯುರ್ವೇದದ ಮೊರೆ ಹೋಗಿರುವುದು ಸ್ವಾಭಾವಿಕವೇ ಆಗಿದೆ ಆದರೆ ಆಯುರ್ವೇದ ಔಷಧಿ ಮಾಡಿಸುವುದು ಈಗ ಹಣ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ ಯಾಕೆಂದರೆ ಈ ಔಷಧಿಗಳ ಬೆಲೆ ಗಗನದೆತ್ತರದಲ್ಲಿ ಇದೆ ಮನೆ ಮದ್ದು ಗಿಡ ಮೂಲಿಕೆಗಳು ಮನೆಯ ಸುತ್ತ ಸಿಗುವುದರಿಂದ ಅದರಿಂದ ಹಲವಾರು ರೋಗಗಳನ್ನು ಗುಣಪಡಿಸಬಹುದು ಆದರೆ ದೊಡ್ಡ ದೊಡ್ಡ ರೋಗಗಳಿಗೆ ಇದು ಸಾಧ್ಯವಾಗುವುದಿಲ್ಲ ಮನೆ ಮದ್ದನ್ನು ಕೂಡಾ ಆಯುರ್ವೇದ ಎಂದು ಹೇಳುವವರು ಇದ್ದಾರೆ ಮನೆ ಮದ್ದು ಮಾಡುವವರು ಆಯುರ್ವೇದ ಔಷಧಿಯ ಬೆಲೆ ಕೇಳಿದರೆ ಚಕಿತರಾಗುತ್ತಾರೆ ಆಯುರ್ವೇದ ಔಷದಿ ಗಳನ್ನು ತಯಾರಿಸಲು ಕಷ್ಟವಾಗುವುದರಿಂದ ಅದಕ್ಕೆ ಹೆಚ್ಚು ಖರ್ಚಾಗುತ್ತದೆ ಎಂದು ಹೇಳುತ್ತಾರೆ ಆದರೆ ಈಗ ಈ ಔಷಧಿ ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳು ಸಂಸ್ಥೆಗಳು ಇವೆ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ ಹಾಗಿದ್ದರೂ ಅದರ ಬೆಲೆ ಕಡಿಮೆಯಾಗುವುದಿಲ್ಲ ನೋನಿ ಎಂಬ ಔಷಧಿಯು ನಿಜವಾಗಿಯೂ ಗಿಡಮೂಲಿಕೆಯಾಗಿದೆ ಇದನ್ನು ಮನೆಯಲ್ಲೇ ತಯಾರಿಸಬಹುದು ಆದರೆ ಅದು ಕಡು ಕಹಿಯಾಗಿರುತ್ತದೆ ಅಂಗಡಿಗಳಲ್ಲಿ ಸಿಗುವ ನೋನಿ ಔಷಧಿ ಬೆಲೆಯನ್ನು ಕೇಳಿದರೆ ತಲೆ ತಿರುಗುತ್ತದೆ ಒಟ್ಟಿನಲ್ಲಿ ಸರಕಾರ ಮುಂದಿನ ದಿನಗಳಲ್ಲಾದರೂ ಆಯುರ್ವೇದ ಔಷಧಿಗಳ ಬೆಲೆ ನಿಯಂತ್ರಿಸುವ ವ್ಯವಸ್ಥೆ ಮಾಡಲಿ

  • ಶ್ರವಣ್ ಕೆ  ಮೂಡಬಿದ್ರೆ