ಬರ ಬಂದಾಗ ಎಚ್ಚರಗೊಳ್ಳುವುದರ ಬದಲು ಈಗಿಂದಲೇ ಜಾಗ್ರತೆಯಿರಲಿ

ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಬರ ಆವರಿಸಿ ಹನಿ ನೀರಿಗೂ ಪರದಾಡುವಂಥ ಸ್ಥಿತಿ ಎದುರಾಗಿತ್ತು. ಜನರಿಗೆ ಕುಡಿಯುವ ನೀರು ಸಿಗದೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವಂತಹ ಸ್ಥಿತಿ ಬಂದಿತ್ತು. ಆದರೆ ಈ ಬಾರಿ ವರುಣನ ಕೃಪೆಯಿಂದ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಲಭ್ಯವಾಗುವ ನೀರನ್ನು ಅಲ್ಲೇ ಇಂಗುವಂತೆ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಈ ಹಿಂದೆ ನೀರಿಗಾಗಿ ಪರಿತಪಿಸುತ್ತಿದ್ದಂತಹ ಆತಂಕಗಳು ದೂರವಾಗುತ್ತವೆ. ಇಂತಹ ಸಮಯದಲ್ಲಿ ಇಂಗು ಗುಂಡಿಗಳನ್ನು, ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆ ನೀರನ್ನು ಸಂರಕ್ಷಿಸುವತ್ತ ಗಮನಹರಿಸಬೇಕಿದೆ. ಕೆಲವೆಡೆ ಸರಕಾರದಿಂದ ಬರುವ ಅನುದಾನದ ಆಸೆಗೆ ಕೆಲವರು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಆದರೆ ಅನುದಾನ ಪಡೆದ ನಂತರ ಅವುಗಳನ್ನು ಮುಚ್ಚುವ ಪರಿಪಾಠ ಇದೆ. ಆದ್ದರಿಂದ ಬರ ಬಂದಾಗ ಎಚ್ಚರಗೊಳ್ಳುವ ಬದಲು ಈಗಿನಿಂದಲೇ ಎಚ್ಚೆತ್ತುಕೊಳ್ಳೋಣ ಸ್ವಯಂಪ್ರೇರಿತವಾಗಿ ಅಂತರ್ಜಾಲ ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳೋಣ

  • ಎಂ ರಾಮಚಂದ್ರ  ಚಿಲಿಂಬಿ  ಮಂಗಳೂರು