ಗುಂಡಿಕ್ಕಿಕೊಂಡು ಸತ್ತ ಜಿಂಟಾ ಸಹೋದರ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹೋದರ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ

ಜಿಂಟಾ ಸಹೋದರ ನಿತೀನ್ ಚೌಹಾನ್, ತನ್ನ ವಾಹನದಲ್ಲಿಯೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪೆÇಲೀಸರಿಗೆ ನಿತೀನ್ ಬಳಿ ಎರಡು ಸೂಸೈಡ್ ನೋಟುಗಳು ದೊರಕಿದ್ದು, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬದವರು ಕಾರಣ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ನಿತೀನ್ ಚೌಹಾನ್ ಮತ್ತು ಅವರ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರ ವಿಚ್ಚೇದನ ಅರ್ಜಿ ಶುಕ್ರವಾರದಂದು ನ್ಯಾಯಾಲಯದ ಮುಂದೆ ಇತ್ಯರ್ಥವಾಗಲಿತ್ತು. ಪತ್ನಿಯ ಪೆÇೀಷಕರು ತನ್ನ ಮಗನನ್ನು ಕೂಡಾ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಸೂಸೈಡ್ ನೋಟ್‍ನಲ್ಲಿ ದಾಖಲಿಸಿದ್ದಾನೆ.

ಪ್ರಸ್ತುತ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.