ಗುತ್ತಕಾಡು ಗರ್ಭಿಣಿಗೆÉ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ಗರ್ಭಿಣಿ ಮಹಿಳೆ ಮೆಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುತ್ತಕಾಡು ತಾಳಿಪ್ಪಾಡಿ ಗ್ರಾಮದ ಚಿನ್ಮಯಬೆಟ್ಟು ನಿವಾಸಿ ಸಂತೋಷ ಪೂಜಾರಿ (35) ಎಂಬವರ ವಿರುದ್ಧ ದೂರಲಾಗಿದೆ. ಆರೋಪಿ ಸಂತೋಷನನ್ನು ಮೂಲ್ಕಿ ಪೊಲೀಸರು ಬಂದಿಸಿದ್ದಾರೆ.

ಆರೋಪಿ ಗುರುವಾರ ಸಂಜೆ ವೇಳೆಗೆ ಮದ್ಯ ಸೇವಿಸಿ ಗುತ್ತಕಾಡು ಬಳಿಯ ಅನಿತಾ ಮೇರಿ ಡಿಸೋಜ ಎಂಬವರ ಮನೆಯ ಕಿಟಿಕಿ ಗ್ಲಾಸುಗಳನ್ನು ಪುಡಿ ಪುಡಿ ಮಾಡಿದ್ದಾನೆ ಎನ್ನಲಾಗಿದೆ. ಆಗ ಮನೆಯಲ್ಲಿದ್ದ ಅನಿತಾ ಹೊರ ಬರುವಷ್ಟರಲ್ಲಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದಾನೆ ಅನಿತಾ ಗರ್ಭಿಣಿಯಾಗಿದ್ದು ಹಲ್ಲೆಯಿಂದ ತೀವ್ರ ಗಾಯಗೊಂಡ ಅವರು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.