ಕಾಮಗಾರಿ ನಿರ್ವಹಿಸುವಾಗ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಕೊಲೆ ಮೊಕದ್ದಮೆ ದಾಖಲಿಸಿ

ಸರಕಾರ ಸಾರ್ವಜನಿಕವಾಗಿ ಯಾವುದೇ ಕಾಮಗಾರಿ ನಿರ್ವಹಿಸುವಾಗ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಜೀವಹಾನಿಗಳಾಗದಂತೆ ಕಟ್ಟು ನಿಟ್ಟಿನ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕೆಂದು ಸರಕಾರಿ ಕಾಮಗಾರಿ ವ್ಯವಸ್ಥೆಯಲ್ಲಿ ಹಾಗೂ ಕಾನೂನಿನಲ್ಲಿ ಕೂಡಾ ಇದೆ ಇಲ್ಲಿ ಲೋಪಗಳಾಗಿ ಜೀವಹಾನಿಯಾದಾಗ ಇದಕ್ಕೆ ಅಪರಾಧಿ ಸ್ಥಾನದಲ್ಲಿ 1ನೇ ಆರೋಪಿಯಾಗಿ ಸರಕಾರದ ವತಿಯಿಂದ ಯಾರು ಕಾಮಗಾರಿ ನಿರ್ವಹಿಸಲು ಆದೇಶ ನೀಡಿರುವರೋ ಅವರನ್ನೇ 1ನೇ ಆರೋಪಿಯನ್ನಾಗಿ ಮಾಡಬೇಕು. ಏಕೆಂದರೆ ಸರಕಾರಿ ಸಂಬಳ ಪಡೆದು ಸರಕಾರಿ ಸವಲತ್ತುಗಳನ್ನು ಅನುಭವಿಸುತ್ತಿರುವಾಗ ಮತ್ತು ಗುತ್ತಿಗೆದಾರನು ತನಗೆ ನಿರ್ವಹಿಸಲು ಆದೇಶಿಸಿದ ಕೆಲಸ ನಿರ್ವಹಿಸುವಾಗ ಸುರಕ್ಷತೆಯ ಬಗ್ಗೆ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಆದೇಶ ಮತ್ತು ಅದರ ಮೇಲ್ವಿಚಾರಣೆ ಸರಕಾರಿ ಅಧಿಕಾರಿಯ ಹೊಣೆ. ಗುತ್ತಿಗೆದಾರರು ವಿಫಲನಾದಲ್ಲಿ ಕೂಡಲೇ ಗುತ್ತಿಗೆಯನ್ನು ರದ್ದು ಮಾಡಿ ಮತ್ತೊಬ್ಬರಿಗೆ ಆ ಕಾಮಗಾರಿ ವಹಿಸಿ ಕೊಡುವುದು ಕಾನೂನಿನ ನಿಯಮ ನಿನ್ನೆ ಕಾಟಿಪಳ್ಳದಲ್ಲಿ ಒಳಚರಂಡಿ ಕಾಮಗಾರಿ ಗುಂಡಿಗೆ ಬಿದ್ದು ಪ್ರಾಣ ಹಾನಿಯಾಗಿದ್ದು ಇದಕ್ಕೆ ಗುತ್ತಿಗೆ ವಹಿಸಿಕೊಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರನೇ ಸಂಪೂರ್ಣ ಹೊಣೆಗಾರರಾಗಿದ್ದು, ಇವರ ಮೇಲೆಯೇ ಮೊಕದ್ದಮೆ ದಾಖಲಿಸಿ ಕುಟುಂಬಕ್ಕೆ ಪರಿಹಾರವನ್ನು ಕೂಡಾ ಇವರಿಂದ ನೀಡುವಂತೆ ಆದೇಶಿಸಬೇಕು ಇಂತಹ ಪ್ರಕರಣ ಇದೇ ಮೊದಲೇನಲ್ಲ. ಕಳೆದ ವರ್ಷ ಕ್ರೋಡಿಕಲ್ ಕ್ರಾಸಿನಲ್ಲಿ ರಸ್ತೆ ಗುತ್ತಿಗೆದಾರರೊಬ್ಬರು ಜೆಸಿಬಿಯಲ್ಲಿ ರಸ್ತೆಯ ತೋಡಿನ ಕಾಮಗಾರಿ ನಿರ್ವಹಿಸುತ್ತಿದ್ದಾಗ ರಾತ್ರಿ ಪಾದಚಾರಿಯೊಬ್ಬರು ನಡೆದುಕೊಂಡು ಹೋಗುವಾಗ ನೀರಿನಿಂದ ತುಂಬಿದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಇಂತಹ ಘಟನೆಗಳು ನಡೆದಾಗ ಒಂದೆರಡು ದಿನ ಜನರು ಮಾತನಾಡುತ್ತಾರೆ ಮತ್ತೆ ಸುಮ್ಮನಾಗುತ್ತಾರೆ. ಇಂತಹ ಘಟನೆಗಳಿಗೆ ಸಂಪೂರ್ಣ ಹೊಣೆಗಾರರನ್ನಾಗಿ ಸರಕಾರಿ ಅಧಿಕಾರಿ ಗುತ್ತಿಗೆದಾರ ಸ್ಥಳೀಯ ಕಾರ್ಪೋರೇಟರ್ ಕ್ರಮವಾಗಿ 1ನೇ 2ನೇ 3ನೇ ಆರೋಪಿಯನ್ನಾಗಿಸಿ ಅಪರಾಧಿಗಳನ್ನಾಗಿ ಮಾಡಿದರೆ ಮಾತ್ರ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ. ಇದರೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಾ 4ನೇ ಅಪರಾಧಿಗಳಾಗುತ್ತಾರೆ ಎಂದು ಒಬ್ಬ ಸಾಮಾನ್ಯ ನಾಗರಿಕನಾಗಿ ನನ್ನ ಅಭಿಪ್ರಾಯ ನಮ್ಮ ನಗರ ಪಾಲಿಕಾ ವ್ಯಾಪ್ತಿಯಲ್ಲಿ ಎಲ್ಲಿ ಏನೇ ಕಾಮಗಾರಿ ನಡೆಯುತ್ತಿದ್ದರೂ ಸರಿಯಾದ ಸುರಕ್ಷತಾ ಫಲಕ ಬ್ಯಾರಿಕೇಡ್ ಹಾಗೂ ರಿಪ್ಲೆಕ್ಟರ್ ಅಪಾಯ ದೀಪಗಳ ವ್ಯವಸ್ಥೆ ಮಾಡುತ್ತಿಲ್ಲ. ಸರಕಾರಿ ಅಧಿಕಾರಿಗಳು ವಿದೇಶಕ್ಕೆ ಅಧ್ಯಯನ ಪ್ರವಾಸಕ್ಕೆಂದು ಹೋಗಿ ಬರುತ್ತಿರುತ್ತಾರೆ. ಆದರೆ ಅಲ್ಲಿಯ ಸಾರ್ವಜನಿಕರು ಸುರಕ್ಷತೆಯ ನಿಯಮಗಳನ್ನು ಯಾಕೆ ಅಧ್ಯಯನ ಮಾಡಿ ಇಲ್ಲಿ ಅಳವಡಿಸಿಕೊಳ್ಳುವುದಿಲ್ಲ
ಇನ್ನು ಮುಂದಕ್ಕೆ ಗುತ್ತಿಗೆದಾರರಿಗೆ ಅವರು ಕಡಿಮೆ ಮೊತ್ತಕ್ಕೆ ಗುತ್ತಿಗೆ ಕೆಲಸ ನಿರ್ವಹಿಸಲು ಕೊಡದೆ, ಕಾಮಗಾರಿಗೆ ಸರಿಯಾದ ಕಾಮಗಾರಿ ಮೊತ್ತವನ್ನು ನಿಗದಿಪಡಿಸಿ ಗುತ್ತಿಗೆದಾರರು ಕ್ರಮಬದ್ಧವಾದ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾಮಗಾರಿಯನ್ನು ನಿರ್ವಹಿಸಬೇಕು ತಮ್ಮ ಬೇಜಾವ್ದಾಬಾರಿಯಿಂದ ಮಾನವನ ಅತೀ ಅಮೂಲ್ಯ ಜೀವ ಹಾನಿಯಾಗದಂತೆ ನೋಡಿಕೊಳ್ಳಬೇಕು ಒಂದು ವೇಳೆ ಅವಘಡ ಸಂಭವಿಸಿದರೆ ಇದಕ್ಕೆ ಸರಕಾರಿ ಇಂಜಿನಿಯರ್ ಗುತ್ತಿಗೆದಾರ ಸ್ಥಳೀಯ ಪೊಲೀಸ್ ಅಧಿಕಾರಿ ಹಾಗೂ ನಗರಪಾಲಿಕೆಸದಸ್ಯ ಇವರೇ ನೇರಹೊಣೆ ಎಂಬುದು ಸಾರ್ವಜನಿಕರ ವಾದ ಇಲ್ಲವಾದಲ್ಲಿ ನಾಗರಿಕರೆಲ್ಲ ಒಟ್ಟೂ ಸೇರಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವ ಸಂದರ್ಭ ಬರಬಹುದು

  • ರಮೇಶ್ ಪೂಜಾರಿ  ಮಂಗಳೂರು

LEAVE A REPLY