ಪ್ರಸನ್ನ ಗಣಪತಿ ಭಕ್ತರಿಗೆ ತುಂಬಾ ಬೇಜಾರಾಗಿದೆ

ಮಣಿಪಾಲದ ಹತ್ತಿರ ಇರುವ ಹುಡ್ಕೊ ಕಾಲನಿಯಲ್ಲಿರುವ ಮಣ್ಣಪಳ್ಳಕ್ಕೆ ತಾಗಿ ಇರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಮೊಕ್ತೇಸರನ್ನು ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಲ್ಲಿಯ ಪ್ರದೇಶದ ಜನರ ಅಹವಾಲನ್ನು ಸ್ವೀಕರಿಸಿ ಕೂಡಲೇ ವಜಾಗೊಳಿಸಬೇಕಾಗಿದೆ
ದೇವಸ್ಥಾನ ಎಂದರೆ ತನ್ನ ಮನೆಯ ಸ್ವಂತ ಆಸ್ತಿ ಎಂದು ದರ್ಪ ತೋರಿಸುತ್ತಾ ಸ್ಥಳೀಯ ಜನರನ್ನು ಹೆದರಿಸಿ ತನ್ನ ಬೇಳೆ ಬೇಯಿಸುತ್ತಿರುವುದರಿಂದ ಪ್ರಸನ್ನ ಗಣಪತಿ ಭಕ್ತರು ತುಂಬಾ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಮೂಡಬಿದ್ರೆ ಆಳ್ವಾರ ಹೆಸರು ಹೇಳುತ್ತಾ ಜನರನ್ನು ಹೆದರಿಸುವುದು  ದೇವಸ್ಥಾನದಲ್ಲಿ ಕೀಳುಮಟ್ಟದ ವರ್ತನೆ ಮಾಡುವುದು  ರೌಡಿಸಂ ಪ್ರದರ್ಶಿಸುವುದು  ಪೊಲೀಸ್ ಇಲಾಖೆ ತನ್ನ ಅಪ್ಪನ ಆಸ್ತಿ ಎಂದು ಹೇಳುತ್ತಾ ಮಿಂಚುತ್ತಿದ್ದು ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕದಿದ್ದರೆ ಹುಡ್ಕೊ, ಮಣಿಪಾಲ ಜನತೆ ಈತನಿಗೆ ಒಂದು ದಿನ ತಕ್ಕ ಪಾಠ ಕಲಿಸುವುದರಲ್ಲಿ ಎರಡು ಮಾತಿಲ್ಲ
ಈತನ ಟ್ರಸ್ಟ್ ಮತ್ತು ದೇವಸ್ಥಾನಕ್ಕೆ ಬರುವ ಡೊನೇಶನ್ನಿಗೆ ಯಾವುದೇ ಲೆಕ್ಕಪತ್ರ, ರಶೀದಿ ಕೊಡದೆ ತನ್ನ ಜೀವನ ಐಶಾರಾಮಿ ಸುಖಮಯವಾಗಿ ಸಾಗಿಸುತ್ತಿರುವುದು ಸರಿಯಲ್ಲ. ಈತನ ಕೆಲವು ಚೇಲಾಗಳೂ ಈತನ ಗುಲಾಮರಾಗಿ ವರ್ತಿಸುತ್ತಿರುವುದು ಬೇಸರದ ವಿಷಯ
ಕೂಡಲೇ ಈ ದೇವಸ್ಥಾನಕ್ಕೆ ಉದ್ಧಾರಕ್ಕಾಗಿ  ಭಕ್ತಾದಿಗಳಿಗೆ ಸರಿಯಾದ ಪೂಜೆ  ದರ್ಶನ ಸಿಗುವಂತೆ ಮಾಡಲು ನಿಷ್ಠಾವಂತ  ಪ್ರಾಮಾಣಿಕ ಮೊಕ್ತೇಸರರ ಅಗತ್ಯ ಇದ್ದು  ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕೂಲಂಕುಷವಾಗಿ ತನಿಖೆ ಮಾಡಿ ಈಗಿನವರನ್ನು ಮೊಕ್ತೇಸರ ಹುದ್ದೆಯಿಂದ ಕೆಳಗಿಸಿದರೆ ಪ್ರಸನ್ನ ಗಣಪತಿ ಆರ್ಶೀವಾದ ಸದಾ ತಮಗೆ ಇದೆ

  • ರಾಘವೇಂದ್ರ ಭಟ್  ಮಣಿಪಾಲ