ಪ್ರಕಾಶ್ ರೈಗೆ ಜೀವ ಬೆದರಿಕೆ

ಬೆಳಗಾವಿ : “ಬಲಪಂಥೀಯರಿಂದ ನನಗೆ ನಿರಂತರ ಬೆದರಿಕೆ ಕರೆ ಬರುತ್ತಿದೆ”  ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ. “ಬೆದರಿಕೆ ಕರೆಗಳು ಬರುತ್ತಿವೆ ಎಂದು ನಾನು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳುವುದಿಲ್ಲ. ನನ್ನ ಸುತ್ತ ಅಭಿಮಾನಿಗಳು ಮತ್ತು ಜನರಿರುವಾಗ ಯಾರಿಂದಲೂ ದಾಳಿ ಸಾಧ್ಯವಿಲ್ಲ.  ಜನರು ನನ್ನ ಹಿಂದೆ-ಮುಂದೆ ಇರುವಾಗ ಅನ್ಯ ಭದ್ರತೆ ನನಗೇಕೆ” ಎಂದವರು ಪ್ರಶ್ನಿಸಿದ್ದಾರೆ. “ರಾಷ್ಟ್ರೀಯತೆ ಮತ್ತು ಹಿಂದೂತ್ವ ಒಂದೇ ಅಲ್ಲ. ಹಿಂದೂತ್ವ  ಹೊಸ ಮೂಢನಂಬಿಕೆಯಾಗಿದ್ದು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇದನ್ನು ಮುಗ್ಧರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದನ್ನು ಎಲ್ಲರೂ ತಿರಸ್ಕರಿಸಬೇಕು” ಎಂದು ರೈ ಕರೆ ನೀಡಿದರು.

LEAVE A REPLY