ಬಯಲುಗದ್ದೆ ಸಮಿತಿಗೆ ಪವರ್ ಟಿಲ್ಲರ್ ವಿತರಣೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಾಸರಗೋಡು ಬ್ಲಾಕ್ ಪಂಚಾಯತ ನೇತೃತ್ವದಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ ಜನಪರ ಯೋಜನೆಯ ಅಂಗವಾಗಿ 9 ಬಯಲುಗದ್ದೆ ಸಮಿತಿಗೆ ಬ್ಲಾಕ್ ಪಂಚಾಯತ ಕಚೇರಿ ಪರಿಸರದಲ್ಲಿ ಪವರ್ ಟಿಲ್ಲರ್ ವಿತರಿಸಲಾಯಿತು.

ಕುಂಬಳೆ, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡು ಗ್ರಾಮ ಪಂಚಾಯತಿಯ ಬಯಲುಗದ್ದೆ ಸಮಿತಿಗಳಿಗೆ ಪವರ್ ಟಿಲ್ಲರ್ ವಿತರಿಸಲಾಯಿತು. ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಝಾಕ್ ಅವರು ಪವರ್ ಟಿಲ್ಲರ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಈ ಯೋಜನೆಯಿಂದ ಭತ್ತದ ಕೃಷಿಗೆ ಹೆಚ್ಚು ಪ್ರಯೋಜನ ದೊರಕಲಿದೆ” ಎಂದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಅಧಿಕಾರಿಗಳು ಪಾಲ್ಗೊಂಡರು

ಬ್ಲಾಕ್ ಪಂಚಾಯತ ಪ್ರಸ್ತುತ ವರ್ಷ ಒಟ್ಟು 9 ಪವರ್ ಟಿಲ್ಲರನ್ನು ಯೋಜನೆಯ ನಿಧಿ ಬಳಸಿ ವಿವಿಧ ಗ್ರಾ ಪಂ.ಗಳಿಗೆ ವಿತರಿಸಿದ್ದು, ಈ ಪೈಕಿ 5 ಪವರ್ ಟಿಲ್ಲರನ್ನು ಕುಂಬಳೆ ಗ್ರಾ ಪಂ.ಗೆ ವಿತರಿಸಲಾಗಿದೆ. ಕುಂಬಳೆ ಗ್ರಾ ಪಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಈಗಲೂ ಭತ್ತದ ನಾಟಿ ನಡೆಸಲಾಗುತ್ತಿದ್ದು, ಈ ಕಾರಣದಿಂದ ಗ್ರಾ ಪಂ ಅಧ್ಯಕ್ಷರು, ಬ್ಲಾ ಪಂ ಸದಸ್ಯರ ಮನವಿಯಂತೆ 5 ಪವರ್ ಟಿಲ್ಲರ್ ವಿತರಿಸಲಾಯಿತು. ಈ ಮೂಲಕ ಕುಂಬಳೆ ವ್ಯಾಪ್ತಿಯ ಗದ್ದೆ ಬಯಲು ಸಮಿತಿಯನ್ನು ಇನ್ನಷ್ಟು ಬಲಗೊಳಿಸಿ ಬೃಹತ್ ಪ್ರಮಾಣದಲ್ಲಿ ಭತ್ತದ ಕೃಷಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುತ್ತಿದೆ.

LEAVE A REPLY