ತೆರಿಗೆ ವಂಚಿಸಿ ಸಾಗಿಸಿದ ಕೋಳಿ ಸಹಿತ ವಾಹನ ವಶ : 1.8 ಲಕ್ಷ ರೂ ದಂಡ

ಸಾಂದರ್ಭಿಕ ಚಿತ್ರ

ಕಾಸರಗೋಡು : ಕರ್ನಾಟಕದಿಂದ ತೆರಿಗೆ ಪಾವತಿಸದೆ ಕಾಸರಗೋಡಿನತ್ತ ಕೋಳಿ ಸಾಗಾಟ ವ್ಯಾಪಕಗೊಂಡಿದೆ. ವಿಟ್ಲಕ್ಕೆ ತಲುಪುವ ಕೋಳಿ ವಾಹನಗಳು ಬಳಿಕ ಪೆರ್ಲಕ್ಕೆ ತಲುಪದೆ ಒಳದಾರಿ ಮೂಲಕ ಸಾಗಿ ಬದಿಯಡ್ಕಕ್ಕೆ ತಲುಪುತ್ತಿದೆ. ಕಳೆದ ಹಲವು ದಿನಗಳಿಂದ ಈ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಅರಿತ ಪೆÇಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ಪೆರ್ಲ ಬಳಿಯ ಬೆದ್ರಂಪಳ್ಳದಲ್ಲಿ ಕಾದು ನಿಂತ ಬದಿಯಡ್ಕ ಪೆÇಲೀಸರು ಒಂದು ಲೋಡ್ ಕೋಳಿಯನ್ನು ವಾಹನ ಸಹಿತ ವಶಪಡಿಸಿಕೊಂಡಿದ್ದಾರೆ. ಮಿನಿ ಲಾರಿಯಲ್ಲಿ 50 ಪೆಟ್ಟಿಗೆಗಳಲ್ಲಾಗಿ ಕೋಳಿ ಸಾಗಿಸಲಾಗುತ್ತಿತ್ತು. ಬಳಿಕ ಅದನ್ನು ಮಾರಾಟ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಲಾರಿ ಚಾಲಕನಿಂದ 1,08,750 ರೂ ತೆರಿಗೆ ವಸೂಲು ಮಾಡಿ ಬಿಡುಗಡೆಗೊಳಿಸಲಾಯಿತು.