`ಪೊಟ್ಟು ಕೆದು’ ಹೆಸರಿನಿಂದ ಯಾರಿಗೂ ಅವಮಾನ ಆಗೋಲ್ಲ

ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನಲ್ಲಿರುವ ಪೊಟ್ಟುಕೆರೆ ಪರಿಸರದಲ್ಲಿ ಪೊಟ್ಟುಕೆರೆ ರಸ್ತೆ ಎಂದು ನಗರಸಭೆಯು ಫಲಕ ಹಾಕಿರುವುದನ್ನು ಕೆಲವರು ವಿರೋಧಿಸಿ “ಈ ಹೆಸರಿನಿಂದ ನಮಗೆ ಅವಮಾನವಾಗುತ್ತಿದೆ, ಇದನ್ನು ಬೃಂದಾವನ ಕೆರೆ ಎಂದು ಬದಲಾಯಿಸಬೇಕು” ಎಂದು ಹೇಳುತ್ತಿರುವುದು ಸರಿಯಲ್ಲ. ಹೀಗೆ ಕರೆದ ಕೂಡಲೇ ಇಲ್ಲಿ ನೀರು, ಗಿಡಮರಗಳು, ಹೂ ಬಳ್ಳಿಗಳು ಉಕ್ಕುವ ಪವಾಡ ಆಗುವುದಿಲ್ಲ.

ನಿಜವಾಗಿ `ಪೊಟ್ಟು ಕೆದು’ ಎಂಬ ಹೆಸರಿನ ಕರೆಯೊಂದು ಇಲ್ಲಿ ಇದ್ದ ಕಾರಣ ಆ ಹೆಸರು ಬಂದಿರಬಹುದು. ಅದನ್ನು ವಕ್ರ ವಕ್ರವಾಗಿ ಅರ್ಧ ಕನ್ನಡ, ಅರ್ಧ ತುಳುವನ್ನಾಗಿಸಿ ಪೊಟ್ಟುಕೆರೆ ಮಾಡಲಾಗಿದೆ. ಈಗ ಇದನ್ನು ಸಂಸ್ಕøತಿಕರಣಗೊಳಿಸಿ ಬೃಂದಾವನ ಕೆರೆ ಮಾಡಲು ಹೊರಟಿದ್ದಾರೆ. ಈ ರೀತಿಯಾಗಿ ಮೂಲ ಹೆಸರು ಬದಲಾವಣೆ ಮಾಡುವುದು ಆ ಊರಿಗೆ ಅವಮಾನ ಮಾಡಿದಂತೆ.

ಪೊಟ್ಟು ಕೆದು ಹೆಸರಿನಿಂದ ಯಾರಿಗೂ ಅವಮಾನ ಆಗೋಲ್ಲ. ಹಾಗೊಂದು ವೇಳೆ ಅಪಮಾನ ಆಗುವುದೇ ಆಗಿದ್ದರೆ ಅಂಥವರು ತಮ್ಮ ತಂದೆಯ ಹಳೆಯ ಹೆಸರನ್ನು ಇಂಗ್ಲೀಷಿಕರಣ ಮಾಡಲಿ. ಸುಂದರ ಎಂಬ ಹೆಸರು ಇದ್ದರೆ `ಬ್ಯೂಟಿಫುಲ್’ ಅಂತ ಬದಲಾಯಿಸಲಿ. ಇದನ್ನು ಪಿ ಕೆ ರಸ್ತೆ ಎಂದು ಕರೆದು ಮೂಲ ಮರೆಮಾಚಲು ನೋಡುವುದೂ ಬೇಡ. ಪೊಟ್ಟು ಕೆರೆ ಅಥವಾ ಪೊಟ್ಟು ಕೆದು ಎಂದೇ ಇರಲಿ. ಆ ಮೂಲಕ ಹೆಸರು ಬದಲಾವಣೆಯನ್ನು ನಾನು ವಿರೋಧಿಸುತ್ತೇನೆ.

  • ತುಳು ಅಭಿಮಾನಿ, ಗೋಪಾಲಪುರ-ಉಡುಪಿ