ವಾಮಂಜೂರು ಚೆಕ್ ಪೋಸ್ಟಿನಲ್ಲಿ ಹೊಂಡ

ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಾಮಂಜೂರು ಚೆಕ್ ಪೋಸ್ಟ್ ಬಳಿಯಲ್ಲಿ ಮತ್ತೆ ಹೊಂಡಗಳೆದ್ದು ಶೋಚನೀಯಾವಸ್ಥೆಗೆ ತಲುಪಿದೆ. ಚೆಕ್ ಪೋಸ್ಟ್ ಸಮೀಪದ ಸೇತುವೆಯಿಂದ ಹೊರ ಬಂದು ಹೆದ್ದಾರಿಗೆ ಪ್ರವೇಶಿಸುವಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದ್ದು, ಇದು ಹೆದ್ದಾರಿಯಲ್ಲಿನ ಸಂಚಾರಕ್ಕೂ ಸಮಸ್ಯೆಯಾಗಿದೆ. ವೇಗವಾಗಿ ಬರುವ ವಾಹನಗಳು ಈ ಹೊಂಡಗಳಿಗೆ ಬಿದ್ದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗುತ್ತಿದೆ ಈ ಪರಿಸರದಲ್ಲಿ ವಾಹನಗಳ ನಿಲುಗಡೆಯಿಂದಲೂ ಭಾರೀ ಅಪಾಯಕ್ಕೆ ಕಾರಣವಾಗುತ್ತಿದೆ. ಕಳಪೆ ಕಾಮಗಾರಿಯಿಂದ ಈ ಭಾಗದಲ್ಲಿ ಪದೇ ಪದೇ ರಸ್ತೆ ಹಾನಿಯಾಗುತ್ತಿದೆ. ಇದೀಗ ಮಳೆ ನೀರು ಹೊಂಡದಲ್ಲಿ ತುಂಬಿಕೊಂಡಿದ್ದು, ವಾಹನ ಚಾಲಕರಲ್ಲಿ ಆತಂಕ ಸೃಷ್ಟಿಯಾಗಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಿ ಯಾವುದೇ ಅನಾಹುತ ಸಂಭವಿಸದಂತೆ ಕಳಪೆ ರಸ್ತೆಗೆ ಏನಾದರೊಂದು ಮುಕ್ತಿ ನೀಡಬೇಕಿದೆ

  • ಸುರೇಶ್ ಕೋಟ್ಯಾನ್  ಮಂಜೇಶ್ವರ