ಬೀಚ್ ರಸ್ತೆಯಲ್ಲಿ ಹೊಂಡ

ರಾಷ್ಟ್ರೀಯ ಹೆದ್ದಾರಿ 66 ಪಣಂಬೂರು ಬೀಚಿಗೆ ಹೋಗುವಲ್ಲಿನ ತಿರುವಿನಲ್ಲಿ ಬೃಹತ್ ಗಾತ್ರದ ಹೊಂಡ ಬಿದ್ದು ವಾಹನ ಓಡಾಡಲು ಕಷ್ಟವಾಗಿದೆ ಇಷ್ಟಲ್ಲದೆ ಈ ತಿರುವಿನ ಚರಂಡಿ ಮೇಲೆ ಹೊದಿಸಲಾದ ಬೃಹತ್ ಗಾತ್ರದ ಕಾಂಕ್ರೀಟ್ ಸ್ಲ್ಯಾಬುಗಳು ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದೆ ಇನ್ನೊಂದೆಡೆ ಟಿಂಬರ್ ಯಾರ್ಡಿನಿಂದ ಸಾಲು ಸಾಲು ಮರ ಸಾಗಿಸುವ ಬೃಹತ್ ಗಾತ್ರದ ಲಾರಿಗಳು ಈ ಹೊಂಡ ಬಿದ್ದ ಜಾಗದಿಂದಲೇ ತಿರುಗಿಸುವುದರಿಂದ ಇಲ್ಲಿ ಪ್ರಯಾಣಿಕರು ಬಸ್ಸಿಗೆ ಕಾಯುವುದು ತುಂಬಾ ಅಪಾಯಕಾರಿ ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಬೀಚಿಗೆ ಹೋಗುವ ರಸ್ತೆ ಸರಿಪಡಿಸಿ ಚರಂಡಿ ಮೇಲಿನ ಸ್ಲ್ಯಾಬನ್ನು ತೆಗೆದು ಮತ್ತೆ ಅಚ್ಚುಕಟ್ಟಾಗಿ ಕಟ್ಟಬೇಕಾಗಿದೆ

  • ಎಂ ಮೆನನ್  ಪಣಂಬೂರು