ಅಂಚೆ ಇಲಾಖೆ ಪರೀಕ್ಷೆಯಲ್ಲಿ ಅವ್ಯವಹಾರ

ಸಾಂದರ್ಭಿಕ ಚಿತ್ರ

ಸೂತ್ರಧಾರನ ಮಾಹಿತಿ ಲಭ್ಯ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಂಚೆ ಇಲಾಖೆಯಲ್ಲಿ ಪೆÇೀಸ್ಟ್ ಮ್ಯಾನ್ ಕಮ್ ಮೈಲ್ ಗಾರ್ಡ್ ಹುದ್ದೆಗಾಗಿ ಮೇ 7ರಂದು ಕಾಸರಗೋಡು ವಿದ್ಯಾನಗರ ಚಿನ್ಮಯ ವಿದ್ಯಾಲಯ ಹಾಗೂ ಸರಕಾರಿ ಕಾಲೇಜಿನಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಅವ್ಯವಹಾರದ ಪ್ರಕರಣದ ಪ್ರಧಾನ ಸೂತ್ರಧಾರನ ಕುರಿತಾದ ಸ್ಪಷ್ಟ ಮಾಹಿತಿ ಪೆÇಲೀಸರಿಗೆ ಲಭಿಸಿರುವ ಬಗ್ಗೆ ಸೂಚನೆ ಲಭಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಹರ್ಯಾನ ಸೋನಾಪತ್ ಗೂರಾರು ನಿವಾಸಿ ಕುಲ್ವಂತನನ್ನು ಪರೀಕ್ಷೆ ನಡೆದ ದಿನವೇ ಬಂಧಿಸಲಾಗಿತ್ತು. ಪರೀಕ್ಷಾ ಹಾಲ್.ನಲ್ಲಿ ಮೊಬೈಲ್ ಮೂಲಕ ಪ್ರಶ್ನೆಗಳಿಗೆ ಉತ್ತರ ಪಡೆಯುತಿದ್ದ ವೇಳೆ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು. ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಮತ್ತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಮೊಬೈಲಿನಲ್ಲಿ ತನಗೆ ಉತ್ತರ ನೀಡಿದ ಹರ್ಯಾಣ ನಿವಾಸಿ ಮುನ್ನಾ ಎಂಬುವನ ಬಗ್ಗೆ ಮಾಹಿತಿ ನೀಡಿದ್ದಾನೆ.