ಅಂಚೆ ಪತ್ರಕ್ಕೂ ಬರವೇ

ರಾಜ್ಯವ್ಯಾಪಿ ನೀರಿಗೆ ಬರ ಇರುವಾಗ ಮಂಗಳೂರಿನಲ್ಲಿ ನೀರಿನ ಜೊತೆ ಅಂಚೆ ಪತ್ರಕ್ಕೂ ಪೋಸ್ಟ್ ಕಾರ್ಡ್ ಬರ ಬಂದಂತಿದ್ದು, ಅಂಚೆ ಕಚೇರಿಗಳಲ್ಲಿ ಪೋಸ್ಟ್ ಕಾರ್ಡ್ ಸರಿಯಾಗಿ ಸಿಗದಂತಾಗಿರುವುದು ಬೇಸರದ ಸಂಗತಿ. ಸಾರ್ವಜನಿಕರಿಗೆ ಇದರಿಂದ ಅನಾನುಕೂಲವಾಗುತ್ತಿರುವುದು ವಿಷಾದನೀಯ. ಅತಿ ಕಡಿಮೆ ದರದ ಸುಲಭ ಸಂಪರ್ಕದ ಕೊಂಡಿಯಾದ ಪೋಸ್ಟ್ ಕಾರ್ಡ್ ದೊರೆಯದ ಕಾರಣ ಪತ್ರ ಮುಖೇನ ವ್ಯವಹರಿಸಿ ಸಂಪರ್ಕ ಇಟ್ಟುಕೊಂಡಿರುವವರಿಗೆ ತೊಂದರೆಯಾಗುತ್ತಿದೆ. ಅಂಚೆ ಇಲಾಖೆ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ತೆಗೆದುಕೊಂಡು ಅಂಚೆ ಪತ್ರದ ಮೂಲಕ ವ್ಯವಹರಿಸುವವರ ಬವಣೆ ನೀಗಿಸಲಿ

  • ಕೆ ವಿ ಸೀತಾರಾಮ್
    ಬಿಜೈ ಮಂಗಳೂರು