ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ನಾಯಕರ ಕಚ್ಚಾಟ ಕಾರಣ

ರಾಜ್ಯದಲ್ಲಿ ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟಾಗಿರುವುದು ಸುಳ್ಳಲ್ಲ. ಒಟ್ಟು 97 ಎಪಿಎಂಸಿಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 41ರಲ್ಲಿ ಜಯ ಗಳಿಸಿದರೆ, ಬಿಜೆಪಿ 30ರಲ್ಲಿ ಜಯ ಸಾಧಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲವಿದೆ ಎಂದು ಆ ಪಕ್ಷದ ವರಿಷ್ಢರು ಅಭಿಪ್ರಾಯ ಪಟ್ಟಿದ್ದಾರೆ. ಫಲಿತಾಂಶ ಹೊರ ಬಿದ್ದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಮಾತನಾಡಿ ಬಿಜೆಪಿಗೂ ಸಾಕಷ್ಟು ಬಲವಿದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದರೂ ಹೆಚ್ಚಿನ ಪ್ರಮಾಣದ ಗೆಲುವಿನ ಸಾಧ್ಯತೆ ಇತ್ತಾದರೂ ಭಿನ್ನಮತ ಮತದಾರರನ್ನು ಕಾಂಗ್ರೆಸ್ ಪಕ್ಷದತ್ತ ತಿರುಗಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿ. ಇದು ಬಿಜೆಪಿಗೆ ಪಾಠವೂ ಹೌದು. ಇದೇ ರೀತಿ ಜಗಳ ಮುಂದುವರೆದರೆ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಪೆಟ್ಟು ಅನುಭವಿಸುವ ಸಾಧ್ಯತೆ ಇಲ್ಲದಿಲ್ಲ

  • ರವಿಕಾಂತ್  ಸಾಸ್ತಾನ