ಬಿಲ್ಲವರು ಹಿಂದೂತ್ವ ಬಿಲ ಸೇರಲು ಕಾರಣ ಪೂಜಾರಿ

ಜನಾರ್ದನ ಪೂಜಾರಿಯವರೇ ಉಪಚುನಾವಣೆಯಲ್ಲಿ ನಿಮ್ಮ ಭವಿಷ್ಯ ಠುಸ್ಸಾಗಿದೆ. ಸೋಲುವುದು ಖಚಿತ ಎಂದು ಹೇಳಿದ್ದೀರಿ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರು.
ನೀವು ಹಳೇ ಮೈಸೂರಿನ ರಾಜಕೀಯದ ಬಗ್ಗೆ ಭವಿಷ್ಯ ಹೇಳುವ ಬದಲು ಸ್ವತಃ ತನ್ನದೇ ಜಿಲ್ಲೆಯಲ್ಲಿ ಕಾಂಗ್ರೆಸ್ ಬಗ್ಗೆ ಭವಿಷ್ಯ ಹೇಳಿ. ಕರಾವಳಿಯ ಕಾಂಗ್ರೆಸ್ ರಾಜಕೀಯ ಹೊಲಸಾಗಲು ಮತ್ತು ಕೋಮುವಾದಿ ಕೇಸರಿ ಪಕ್ಷ ಹುಲುಸಾಗಿ ಬೆಳೆಯಲು ಅತಿ ಹೆಚ್ಚು ಕಾಣಿಕೆ ಕೊಟ್ಟವರೆಂದರೆ ಜ ಪೂಜಾರಿಯವರು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದ ಬಿಲ್ಲವರು ಕಾಂಗ್ರೆಸ್ ತೊರೆದು ಹಿಂದೂತ್ವ ಬಿಲ ಸೇರಲು ಮೂಲ ಕಾರಣವೇ ಜನಾರ್ದನ ಪೂಜಾರಿ. ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ, ದೇವರಾಜ ಅರಸರ ಭೂ-ಮಸೂದೆ, ಲೋನ್ ಮೇಳ ಇವೆಲ್ಲವುಗಳ ಅತಿ ಹೆಚ್ಚು ಫಲಾನುಭವಿಗಳು ಬಿಲ್ಲವರೇ ಆಗಿದ್ದಾರೆ. ಇದಕ್ಕಾಗಿ ಬಿಲ್ಲವರು ಕಾಂಗ್ರೆಸ್ಸಿಗೆ ಮನಸ್ಸಿನಾಳದಿಂದ ಋಣಿಯಾಗಿದ್ದರು. ಆದರೆ ಬಿಲ್ಲವರು ಕಾಂಗ್ರೆಸ್ ಸರಕಾರದಿಂದ ಪಡೆದ ಇಷ್ಟೆಲ್ಲ ಭಾರಿ ಫಲದ ಕೃತಜ್ಞತೆಯನ್ನು ಪಕ್ಷಕ್ಕಾಗಿ ರಕ್ಷಿಸಿಕೊಳ್ಳುವ ಯಾವುದೇ ಯತ್ನ ಪೂಜಾರಿ ಮಾಡಲಿಲ್ಲ.
ಪೂಜಾರಿ ತನ್ನ ಒರಟು ನಾಲಿಗೆ, ತನ್ನ ಜಾತಿ ಬಾಂದವರನ್ನೇ ಕಡೆಗಣಿಸುವುದು, ಸಹಾಯ ಕೇಳಲು ಬಂದ ಬಿಲ್ಲವರನ್ನು ಅವಮಾನಿಸುವುದು, ಬಿಲ್ಲವ ಸಂಘ ಮತ್ತು ಗೋಕರ್ಣನಾಥ ದೇವಳಗಳಲ್ಲಿ ಕೊಳಕು ರಾಜಕೀಯ, ಉರುಳುಸೇವೆಯಂತಹ ಕಂದಾಚಾರಿ ನಾಟಕ, ಇವುಗಳಿಂದಾಗಿ ಬಿಲ್ಲವರು ಕಾಂಗ್ರೆಸ್ಸಿನ ಕೊಳಕಿನಿಂದ ದೂರ ಸರಿದು ಹಿಂದೂತ್ವದ ಕೊಚ್ಚೆಗೆ ಬಿದ್ದರು. ಹಾಗಾಗಿ ಬಿಲ್ಲವ ಯುವಕರು ಹಿಂದೂ ಧರ್ಮದ ಅಫೀಮು ಸೇವಿಸಿ ಸಂಘಿ ಗೂಂಡಾ ಪಡೆಗಳ ಕಾಲಾಳುಗಳಾಗಿ ಜೈಲು ಸೇರುತ್ತಿದ್ದಾರೆ ಅಥವಾ ಕೊಲೆಯಾಗುತ್ತಿದ್ದಾರೆ. ಆದರೆ ಈಗಲೂ ಪೂಜಾರಿಯರು ಕಾಂಗ್ರೆಸ್ ಪಾಲಿಗೆ ತಾನೇ ಭಸ್ಮಾಸುರನಾಗಿರುವುದು ಸತ್ಯ. ಈ ಇಳಿ ವಯಸ್ಸಿನಲ್ಲಿಯೂ ನಾಲ್ಕು ದಿನಕ್ಕೊಮ್ಮೆ ತನ್ನ ಅದೇ ನಾಲ್ಕೈದು ಛೇಲಾಗಳೊಂದಿಗೆ ಪ್ರೆಸ್ ಮೀಟ್ ಕರೆದು ಮುಖ್ಯಮಂತ್ರಿ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸಿ, ಹೀಯಾಳಿಸಿ, ಅವಮಾನಿಸಿ ಕಾಂಗ್ರೆಸ್ ಪತನಕ್ಕೆ ಪೂಜಾರಿ ನೇರ ಕಾರಣವಾಗುತ್ತಿದ್ದಾರೆ. ಎಸ್ ಎಂ ಕೃಷ್ಣ ಎಂಬ ಲಿಂಗಾಯತ ದ್ವೇಷಿ ಒಕ್ಕಲಿಗನೊಬ್ಬ ಬಿಜೆಪಿ ಸೇರಿದ್ದರಿಂದ ಮೈಸೂರು ಭಾಗದ ಕೃಷ್ಣ ವಿರೋಧಿ ಲಿಂಗಾಯತರು ಕಾಂಗ್ರೆಸ್ ಕಡೆ ಸರಿದಿದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭವಾಗಿದೆ

  • ಆರ್ ಭಾಸ್ಕರ್ ಅಮೀನ್ 
    ಮಠದಕಣಿ