`ಜಿಲೇಬಿ’ ತಿನ್ನಿಸಲಿರುವ ಪೂಜಾ

ಮಳೆಹುಡುಗಿ ಪೂಜಾ ಗಾಂಧೀ ಈಗ ತನ್ನ ಅಭಿಮಾನಿಗಳಿಗೆ `ಜಿಲೇಬಿ’ ತಿನ್ನಿಸಲು ರೆಡಿಯಾಗಿದ್ದಾಳೆ. ಡೈರೆಕ್ಟರ್ ಲಕ್ಕಿ ಶಂಕರ್ ಆಕ್ಷನ್ ಕಟ್ ಹೇಳಿರುವ `ಜಿಲೇಬಿ’ ಚಿತ್ರವೊಂದು ಹಾಟ್ ಆಂಡ್ ಸ್ಪೈಸಿಯಾಗಿದ್ದು ಈ ಚಿತ್ರವೀಗ `ಎ’ ಸರ್ಟಿಫಿಕೇಟಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರದಲ್ಲಿ ಗಟ್ಟಿ ಕತೆ ಇಲ್ಲದಿದ್ದರೂ ಇದೊಂದು ಪಕ್ಕಾ ಮನರಂಜನೆ ನೀಡುವ ಚಿತ್ರವೆನ್ನುತ್ತಾರೆ ಶಂಕರ್. ಸಿನಿಮಾ ಬಿಡುಗಡೆಯಾಗುವ ಮೊದಲೇ ಚಿತ್ರದ ಎರಡು ಸೀಕ್ವೆಲ್ ಬರಲಿದೆ ಎಂದು ಈಗಲೇ ಅನೌನ್ಸ್ ಮಾಡಿದ್ದಾರೆ ನಿರ್ದೇಶಕರು. ಮುಂದಿನ ಭಾಗ ದುಬೈನಲ್ಲಿ ಶೂಟಿಂಗ್ ನಂತರದ ಸಿನಿಮಾ ಇಂಗ್ಲೆಂಡಿನಲ್ಲಿ ಚಿತ್ರೀಕರಣ ಮಾಡುವ ಇರಾದೆ ಇದೆಯಂತೆ ಶಂಕರಗೆ. ಅಂದ ಹಾಗೆ ಈ ಸಿನಿಮಾದಲ್ಲಿ ವಲ್ಗರ್ ಇಲ್ಲ ಎನ್ನುವುದು ಶಂಕರ್ ಅಂಬೋಣ.
ಪೂಜಾಗೆ ಈ ಸಿನಿಮಾದಲ್ಲಿ ಕೂಲ್ ಗರ್ಲ್ ಪಾತ್ರ. ಮೂವರು ಹುಡುಗರು ಈಕೆ ಬಗ್ಗೆ ತಮ್ಮದೇ ಆದ ಭಾವನೆ ಇಟ್ಟುಕೊಂಡಿದ್ದು ಅದೇ ಚಿತ್ರಕ್ಕೆ ಮನರಂಜನೆ ಒದಗಿಸುವ ಭಾಗವಾಗಿದೆ. ವಿಜಯ್ ಚೆಂದೂರ್, ಯಶಸ್, ನಾಗೇಂದ್ರ ಈ ಚಿತ್ರದ ಹೀರೋಗಳು. ಇದೊಂದು ಟೈಮ್ ಪಾಸ್ ಕಾಮಿಡಿ ಸಿನಿಮಾ ಎನ್ನುತ್ತಾರೆ `ಯು ದಿ ಎಂಡ್’ ಸಿನಿಮಾ ಖ್ಯಾತಿಯ ನಾಗೇಂದ್ರ. ಈ ಸಿನಿಮಾ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ.