ಬೋಲ್ಡ್ ಪಾತ್ರದಲ್ಲಿ ಪೂಜಾ

ಮಳೆ ಹುಡುಗಿ ಎಂತಲೇ ಫೇಮಸ್ ಆಗಿರುವ ಪೂಜಾ ಗಾಂಧಿ ಈಗ ಅವಳ ಅಭಿಮಾನಿಗಳಿಗೆ `ಜಿಲೇಬಿ’ ಹಂಚಲು ರೆಡಿಯಾಗಿದ್ದಾಳೆ. ಹೌದು,  ಪೂಜಾ ಅಭಿನಯದ `ಜಿಲೇಬಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಲಕ್ಕಿ ಶಂಕರ್ ನಿರ್ದೇಶಿಸಿ ನಿರ್ಮಿಸಿರುವ `ಜಿಲೇಬಿ’ಯಲ್ಲಿ ಪೂಜಾ ವೇಶ್ಯೆಯ ಪಾತ್ರ ಮಾಡಿದ್ದು ಚಿತ್ರದಲ್ಲಿ ಸಖತ್ ಡೇರಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಪೂಜಾ ಜೊತೆಗೆ ಯಶಸ್, ವಿಜಯ್ ಚೆಂಡೂರ್, ದತ್ತಣ್ಣ, ನಾಗೇಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದ ಫೆÇೀಟೋ ಶೂಟ್ ನೋಡಿಯೇ ಅನೇಕರ ಹುಬ್ಬೇರಿತ್ತು.

ಪೂಜಾ ಗಾಂಧಿಯ ಸಿನಿಮಾ ಬಹಳ ದಿನಗಳ ನಂತರ ಬರುತ್ತಿರುವುದರಿಂದ ಅವಳ ಅಭಿಮಾನಿಗಳು `ಜಿಲೇಬಿ’ ಸವಿಯಲು ಕಾತರದಿಂದ ಕಾಯುತ್ತಿದ್ದಾರೆ.

jilebi1