ಇಬ್ಬರು ಹೆಂಡಿರ ಗಂಡ ಆತ್ಮಹತ್ಯೆ

ಎರಡನೇ ಪತ್ನಿ ಸಬಿಯಾಳೊಂದಿಗೆ ಭಾಸ್ಕರ ಆಚಾರಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಇಬ್ಬರು ಅನ್ಯಕೋಮಿನ ಯುವತಿಯರನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬ ಎರಡನೇ ಪತ್ನಿಯ ಮನೆಯಲ್ಲಿ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ  ಹೆಮ್ಮಾಡಿಯ ಹರೆಗೋಡು ನಿವಾಸಿ ನರಸಿಂಹ ಆಚಾರಿ ಎಂಬವರ ಪುತ್ರ ಭಾಸ್ಕರ ಆಚಾರಿ (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಭಾಸ್ಕರ ಆಚಾರಿ ಎಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದು  ಎಂಟು ವರ್ಷಗಳ ಹಿಂದೆ ಮನೆ ಸಮೀಪದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದ ಪ್ರೀತ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿತ್ತು. ನಂತರ ಆಕೆಗೊಂದು ಹೆಣ್ಣು ಮಗುವೂ ಆಗಿತ್ತು  ಕಳೆದ ನಾಲ್ಕು ವರ್ಷಗಳ ಹಿಂದೆ ಆತನ ಸ್ನೇಹಿತನೇ ಆಗಿದ್ದ ಅಬ್ದುಲ್ ಎಂಬವರ ಪತ್ನಿ ಸಬಿಯಾ ಎಂಬಾಕೆಯನ್ನೂ ಪ್ರೀತಿಸಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ  ನಂತರ ಆಕೆಯ ಹೆಸರನ್ನು ಚೈತ್ರ ಎಂದು ಬದಲಿಸಿಕೊಂಡು ಗಂಡನನ್ನು ಬಿಟ್ಟು ತನ್ನ ಮಗನೊಂದಿಗೆ ಭಾಸ್ಕರ ಆಚಾರಿ ಜೊತೆಗೆ ಬಂದಿದ್ದಳು  ಇಬ್ಬರಿಗೂ ಪ್ರತ್ಯೇಕ ಮನೆ ಮಾಡಿಟ್ಟಿದ್ದ ಭಾಸ್ಕರ ಆಚಾರಿ ಎರಡೂ ಮನೆಗಳಿಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ
ಸೋಮವಾರ ಸಂಜೆ ಬಸ್ರೂರಿನಲ್ಲಿರುವ ಎರಡನೇ ಪತ್ನಿ ಸಬಿಯಾಳ ಮನೆಗೆ ಬಂದಿದ್ದ ಭಾಸ್ಕರ ಆಚಾರಿ ಸ್ನಾನ ಮಾಡಿ  ಪತ್ನಿಯನ್ನು ಸ್ನಾನಕ್ಕೆ ಕಳಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ತಕ್ಷಣ ಸ್ಥಳೀಯರನ್ನು ಕರೆದು ಮೃತದೇಹವನ್ನು ಕೆಳಗಿಳಿಸಿ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಕೊನೆಗೆ ಶವಾಗಾರದಲ್ಲಿ ಮೃತದೇಹವನ್ನಿಡಲಾಗಿದ್ದು  ಮೊದಲ ಪತ್ನಿ ಹಾಗೂ ಮನೆಯವರು ಆಗಮಿಸಿದ್ದು  ಭಾಸ್ಕರ ಆಚಾರಿಯ ಸಾವು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಆರೋಪ ಮಾಡಿದ್ದಾರೆ  ಅಲ್ಲದೇ ಶವಾಗಾರದ ಮುಂದೆಯೇ ಎರಡನೇ ಹೆಂಡತಿ ಸಬಿಯಾಳ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿತ್ತು ಎನ್ನಲಾಗಿದೆ  ಆದರೆ ಸ್ಥಳೀಯ ಕೆಲವರ ಪ್ರಕಾರ ಮೊದಲ ಹೆಂಡತಿ ಭಾಸ್ಕರ ಆಚಾರಿಗೆ ಹಿಂಸೆ ನೀಡುತ್ತಿದ್ದಳು ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದಳು ಎನ್ನುವ ಆರೋಪಗಳು ಕೇಳಿಬಂದಿವೆ  ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ