ಗುಂಡ್ಲುಪೇಟೆ ನಂಜನಗೂಡಿನಲ್ಲಿ ನ್ಯಾಯಯುತ ಚುನಾವಣೆ ನಡೆದಿಲ್ಲ

ಸಾಂದರ್ಭಿಕ ಚಿತ್ರ

ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳಿಗೆ ಮುಕ್ತಾಯಗೊಂಡ ವಿಧಾನಸಭೆ ಉಪಚುನಾವಣೆಯ ಪ್ರಚಾರ ವೈಖರಿ ಹಾಗೂ ಸ್ಪರ್ಧಿಗಳ ಪರವಾಗಿ ಎರಡು ಮುಖ್ಯ ರಾಷ್ಟ್ರೀಯ ಪಕ್ಷಗಳು ನೀರಿನಂತೆ ಹಣ ಖರ್ಚು ಮಾಡುತ್ತಿರುವುದನ್ನು ನೋಡಿದರೆ ಗಾಬರಿ ಆಗುತ್ತದೆ. ಚುನಾವಣಾ ಆಯೋಗ ಕಾಟಾಚಾರಕ್ಕೆ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಯ ವೆಚ್ಚ 25 ಲಕ್ಷ ರೂಪಾಯಿಗಳೆಂದು ನಿಗದಿ ಮಾಡಿದ್ದರೂ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳಿದರೆನ್ನುವ ರೀತಿಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು ಮೇಲ್ನೋಟಕ್ಕೇ ತಿಳಿದಿದೆ. ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಮತ ಕೇಳಿದ್ದು ಕಂಡುಬಂದಿದೆ. ಹಣ, ಹೆಂಡ ಹಂಚಿಕೆಯಾಗಿದೆ. ಇದನ್ನೆಲ್ಲ ಗಮನಿಸುವಾಗ ಈ ಚುನಾವಣೆ ನ್ಯಾಯಯುತ ಚುನಾವಣೆ ಎಂದು ಹೇಗೆ ಹೇಳಲು ಸಾಧ್ಯ
ಚುನಾವಣಾ ಆಯೋಗ ಈ ಬಗ್ಗೆ ಚಿಂತಿಸಿ ಮುಂದಿನ ಚುನಾವಣೆ ವೇಳೆಗೆ ಇನ್ನೂ ಹೆಚ್ಚು ಕಟ್ಟುನಿಟ್ಟಿನಿಂದ ಚುನಾವಣೆಗಳು ನಡೆಯುವಂತೆ ಮಾಡುವ ಅಗತ್ಯವಿದೆ

  • ಚಂದ್ರಕಾಂತ್ ಕೆ  ಮುಡಿಪು