ಮಾಫಿಯಾಕ್ಕೆ ರಾಜಕಾರಣಿ ಬೆಂಬಲ ಮೊದಲು ನಿಲ್ಲಲಿ

ಎಪ್ರಿಲ್ 2ರಂದು ಅಕ್ರಮ ಮರಳುಗಾರಿಕೆ ತಾಣಗಳ ಮೇಲೆ ದಾಳಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಂಪಾರು ಗ್ರಾಮಕರಣಿಕರ ಮೇಲೆ ಹಾಗೂ ಇತರ ಅಧಿಕಾರಿಗಳ ಮೇಲೆ ಮರಳು ಮಾಫಿಯಾ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದು ಅಕ್ಷಮ್ಯ ಅಪರಾಧ. ಉತ್ತರ ಭಾರತದಲ್ಲಿ ಹಿಂದೆ ಪೆಟ್ರೋಲ್ ಮಾಫಿಯಾವು ಸರಕಾರಿ ಅಧಿಕಾರಿಗಳನ್ನು ಹತ್ಯೆಗೈದ ಉದಾಹರಣೆಯಿದೆ. ಆದರೆ ಉಡುಪಿಯಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ಹಲ್ಲೆಯಾದದ್ದು ಇದು ಪ್ರಥಮ ಬಾರಿ. ಭಾರತದಲ್ಲಿ ರಾಜಕಾರಣಿಗಳ ಬೆಂಬಲವಿರುವುದರಿಂದಲೇ ಮಾಫಿಯಾಗಳ ಹಾವಳಿ, ಉಪದ್ರವ ನಡೆಯುತ್ತಿದೆ. ದುಷ್ಕರ್ಮಿಗಳಿಗೆ ಶಿಕ್ಷೆಯಾದರೂ, ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ಮಾಡುವುದು ಅದೇ ಕೆಲಸ. ಅವರಿಗೆ ರಾಜಕಾರಣಿಗಳ ಬೆಂಬಲ ಮೊದಲಾಗಿ ನಿಲ್ಲಬೇಕು. ತಪ್ಪಿತಸ್ಥರು ಜೀವಾವಧಿ ಜೈಲಿನಲ್ಲಿ ಕೊಳೆಯುವಂತಾಗಬೇಕು. ಆಗ ಇಂತಹ ಮಾಫಿಯಾಗಳನ್ನು ನಿಯಂತ್ರಿಸಬಹುದು

  • ಸದಾನಂದ ಹೆಗಡೆಕಟ್ಟೆ
    ಮೂಡಬಿದಿರೆ