ರಾಜಕಾರಣಿಗಳ ಬಿಸಿ ಮಾತುಗಳನ್ನು ತಂಪು ಮಾಡುವ ಕ್ರಮ ಕೈಗೊಳ್ಳಬಾರದೇ

ರಾಜ್ಯದ ರಾಜಕೀಯ ಪಕ್ಷಗಳು ರಾಜಕಾರಣಿಗಳು ಚುನಾವಣೆಗಾಗಿ ಮತ ಗಳಿಕೆಗಾಗಿ ನೀಡುತ್ತಿರುವ ಬಿಸಿಬಿಸಿ ಮಾತುಗಳು ಹೇಳಿಕೆಗಳು ಜನತೆಯ ತಲೆಬಿಸಿ ಮಾಡಿಸಿವೆ ಧಾರ್ಮಿಕ ಸಭೆ ಸಮಾರಂಭಗಳಲ್ಲೂ ರಾಜಕೀಯ ಪಕ್ಷಗಳ ರಾಜಕಾರಣಿಗಳ ಧರ್ಮ ರಾಜಕೀಯ ಜನತೆಯ ನಿದ್ದೆಗೆಡಿಸಿದೆ ಸಮಾಜದಲ್ಲಿ ಈ ಮೂಲಕ ಅಶಾಂತಿ ಸೃಷ್ಟಿಸುತ್ತಿರುವ ರಾಜಕೀಯ ಹೇಳಿಕೆಗಳನ್ನು ರಾಜ್ಯದ ಉಚ್ಛ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬಾರದೆ ರಾಜಕಾರಣಿಗಳ ಬಿಸಿ ಮಾತುಗಳನ್ನು ತಂಪು ಮಾಡುವ ಕ್ರಮ ಕೈಗೊಳ್ಳಬಹುದೇ ಒಂದಂತೂ ಖಂಡಿತಾ ಆಗಲಿದೆ ಚುನಾವಣೆಗಾಗಿ ಧರ್ಮದಲ್ಲೂ ಅಧರ್ಮ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗೆ ಮತದಾರರು ಈ ಬಾರಿ ಬಿಸಿ ಪಾಠ ಕಲಿಸಿಯೇ ಕಲಿಸುತ್ತಾರೆ

  • ಎಂ ಛಾಯಪತಿ  ಕುಂದಾಪುರ