ರಾಜಕಾರಣಿಗಳಿಗೆ ಕನಿಷ್ಠ ಜ್ಞಾನ ಇರಲಿ

ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲ ರಾಜಕೀಯ ಪಕ್ಷದ ಮುಖಂಡರು ಅಶಾಂತಿ ಹುಟ್ಟುಹಾಕುವ ಹೇಳಿಕೆ ನೀಡುತ್ತಿದ್ದು ಇದು ನಿಜಕ್ಕೂ ಆತಂಕಕಾರಿ ಅದರಲ್ಲೂ ವಿರೋಧ ಪಕ್ಷದ ಮುಖಂಡರ ಬಾಯಿಯಿಂದ ಇಂತಹ ಮಾತುಗಳು ಆಗಾಗ ಹೊರ ಬರುತ್ತಿರುವುದನ್ನು ನಾವು ಗಮನಿಸುತ್ತೇವೆ ಕೋಮುಭಾವನೆ ಕೆರಳಿಸುವ ಹೇಳಿಕೆ ಮೂಲಕ ಮತ ಗಳಿಸಬಹುದು ಎಂಬ ಕೆಟ್ಟ ಮನೋಭಾವದಿಂದ ಇವರು ಮೊದಲು ಹೊರಬರಲಿ ಚುನಾವಣೆ ಸಮಯ ಈ ನಾಯಕರು ತಮ್ಮ ನಾಲಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ ಈ ನಾಡಿನ ಜನರು ಸಜ್ಜನಿಕೆ ಗಡಿ ದಾಟಿ ಮಾತನಾಡುವುದನ್ನು ಇಷ್ಟಪಡೋಲ್ಲ ಎಂಬ ಕನಿಷ್ಠ ಜ್ಞಾನದ ಅರಿವು ರಾಜಕಾರಣಿಗಳಿಗೆ ಇರಲಿ

  • ಸುಜಿತ್ ದೇವಾಡಿಗ  ಪದವಿನಂಗಡಿ