ಪಕ್ಷಗಳಿಗೆ ಜಾತಿ ಮುಖ್ಯವಾಗಬಾರದು

ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಗೆಲುವುದಕ್ಕಾಗಿ ಜಾತಿ ಮತಗಳ ಲೆಕ್ಕಾಚಾರ ಹಾಕುತ್ತಿರುವುದು ವಿಷಾದಕರ ಸಂಗತಿಯಾಗಿದೆ.
ತಾವು ಮಾಡಿರುವ ಸಾಧನೆಗಳು ಹಾಗೂ ಮುಂದೆ ಮಾಡಬಹುದಾದ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಅವರ ಮತ ಪಡೆಯಲು ಪ್ರಯತ್ನ ಮಾಡುವುದನ್ನು ಬಿಟ್ಟು ಧರ್ಮ, ಜಾತಿ, ಉಪಜಾತಿಗಳ ಆಧಾರದಲ್ಲಿ ಮತದಾರರನ್ನು ಸೆಳೆಯಲು ತಂತ್ರ, ಕುತಂತ್ರ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ. ಬಿಜೆಪಿಯವರು ಮಾಡಿದರೆಂದು ಕಾಂಗ್ರೆಸ್ಸಿನವರು, ಕಾಂಗ್ರೆಸ್ಸಿನವರು ಮಾಡಿದರೆಂದು ಬಿಜೆಪಿಯವರು ಜಾತಿ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ
ಎಲ್ಲ ಜಾತಿ ಧರ್ಮಗಳವರು ಸದಾ ಕಾಲ ಶಾಂತಿ ಸೌಹಾರ್ದತೆಯಿಂದ ಅಕ್ಕ ಪಕ್ಕದಲ್ಲಿ ಬದುಕಬೇಕಾದವರು. ರಾಜಕಾರಣಿಗಳು ಮತಕ್ಕಾಗಿ ತಂದಿಡುವ ಜಾತಿ ವೈಷಮ್ಯದ ರಾಜಕಾರಣಕ್ಕೆ ಕಿವಿಗೊಡಬಾರದು. ಅದರ ಬದಲಿಗೆ ಅಂತಹವರಿಗೆ ಪಾಠ ಕಲಿಸಬೇಕು

  • ಸುಧೀರ್ ದೇವಾಡಿಗ  ಉದ್ಯಾವರ ಉಡುಪಿ