ಕಾರವಾರ ಯುವಕನ ಮೇಲೆ ಪೊಲೀಸ್ ಚಿತ್ರಹಿಂಸೆ ಅಸೆಂಬ್ಲಿಯಲ್ಲಿ ಪ್ರಸ್ತಾಪ, ತನಿಖೆಗೆ ಪ್ರಧಾನಿ ಕಚೇರಿಯಿಂದಲೂ ರಾಜ್ಯಕ್ಕೆ ಪತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಕಳೆದ ಅಕ್ಟೋಬರ್ 17ರ ರಾತ್ರಿ 10 ಗಂಟೆಗೆ  ಕಾರವಾರ ನಗರ ಪೆÇಲೀಸ್ ಠಾಣೆಯಲ್ಲಿ ನಡೆಯಿತು ಎನ್ನಲಾದ ಪೊಲೀಸ್ ಚಿತ್ರಹಿಂಸೆ ಕುರಿತಂತೆ ಸಂತ್ರಸ್ತರು ದಾಖಲಿಸಿದ ದೂರು ಹಾಗೂ ವಾಸ್ತವ ಪರಿಸ್ಥಿತಿಯಲ್ಲಿ ಅಜಗಜಾಂತರದ ವ್ಯತ್ಯಾಸವಿರುವುದು ಗೃಹಸಚಿವ ಪರಮೇಶ್ವರ ಅವರು ವಿಧಾನಸಭೆಯಲ್ಲಿ ನೀಡಿದ ಉತ್ತರದಿಂದ ಬೆಳಕಿಗೆ ಬಂದಿದೆ.

ಕಾರವಾರ ನಗರ ಬಿಜೆಪಿಯ ಮಾಜಿ ಅಧ್ಯಕ್ಷ ವಿವೇಕಾನಂದ ಬೈಕೇರಿಕರ ಅವರ ಪುತ್ರ ಸಂದೇಶ ಹಾಗೂ ಇತರ ಮೂವರನ್ನು ಕಾರವಾರ ನಗರ ಠಾಣೆಯ ಪಿಎಸ್‍ಐ ಕುಸುಮಾಧರ ಹಾಗೂ ಅವರ ಸಿಬ್ಬಂದಿಗಳು ಕ್ಷುಲ್ಲಕ ಕಾರಣಕ್ಕೆ ಅಮಾನುಷವಾಗಿ ಹೊಡೆದು ಚಿತ್ರ ಹಿಂಸೆ ನೀಡಿದ ಬಗ್ಗೆ ಶಾಸಕ ವಿಶ್ವೇಶ್ವರ ಹೆಗಡೆ ಅವರು ಬೆಳಗಾವಿ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಗೃಹಸಚಿವ ಪರಮೇಶ್ವರ ಅವರು, ಇಡೀ ಪ್ರಕರಣದಲ್ಲಿ ಪೆÇಲೀಸರು ತಾಂತ್ರಿಕ ತಪ್ಪುಗಳನ್ನು ಮಾಡಿರುವುದನ್ನು ತಮ್ಮ ಉತ್ತರದಲ್ಲಿ ಪ್ರಸ್ತಾಪಿಸಿದ್ದಾರೆ. ಗೃಹಸಚಿವರ ಹೇಳಿಕೆಯ ಪ್ರಕಾರ ಪ್ರಾಥಮಿಕ ತನಿಖೆಯಲ್ಲಿ ಪೆÇೀಲಿಸರು ತಪ್ಪು ಎಸಗಿರುವುದು ಕಂಡುಬಂದಿದೆ.

ಘಟನೆಯ ರಾತ್ರಿ ಸಂದೇಶ ಹಾಗೂ ಇತರ ಮೂವರನ್ನು ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ ಪೆÇೀಲಿಸರು ಡ್ರೈವಿಂಗ್ ಲೈಸನ್ಸನ್ನು ಕೇಳಿದಾಗ ಪೆÇಲೀಸರೊಂದಿಗೆ ವಾದ ವಿವಾದ ನಡೆಸಿದರಲ್ಲದೇ ಪೆÇಲೀಸರ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆನಡೆಸಿ ಪಿಎಸ್‍ಐ ಅವರ ಅಂಗಿಯನ್ನು ಎಳೆದು ಬಟ್ಟೆ ಹರಿದಿದ್ದಾರೆ ಎಂಬ ಪೆÇಲೀಸರ ವಾದವನ್ನು ಉಲ್ಲೇಖಿಸಲಾಗಿದೆ. ಈ ಘಟನೆಯ ನಂತರ ಅರೋಪಿಗಳನ್ನು ಠಾಣೆಗೆ ತಂದ ಪಿಎಸ್‍ಐ ಅವರು ಪೊಲೀಸರ ಹೊಡೆತದಿಂದ ಗಾಯಗೊಂಡಿದ್ದ ಬಂಧಿತರನ್ನು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೆ ಕತ್ರ್ಯವ್ಯ ಚ್ಯುತಿ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗೃಹಸಚಿವರು ತಮ್ಮ ಉತ್ತರದಲ್ಲಿ ಪ್ರಸ್ತಾಪಿಸಿದ್ದಾರೆ.

ಅಲ್ಲದೆ ಈ ವಿಷಯದ ಕುರಿತು ಪೆÇಲೀಸರ ವಿರುದ್ಧ ಕಾರವಾರದ ಡಿವೈಎಸ್ಪಿ ಅವರು ತನಿಖೆ ನಡೆಸುತ್ತಿದ್ದು, ಯುವಕರ ವಿರುದ್ಧ ಪಿಎಸ್‍ಐ ನೀಡಿದ ದೂರಿಗೆ ಸಂಬಂಧಿಸಿದಂತೆ ಕದ್ರಾದ ಸಿಪಿಐ ಅವರು ತನಿಖೆ ನಡೆಸುತ್ತಿರುವುದಾಗಿ ಸಚಿವರು ಉತ್ತರಿಸಿದ್ದಾರೆ.

ಯುವಕರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕಾರಣ ನೀಡಿದ್ದ ಪೆÇಲೀಸರು ಹಲ್ಲೆಗೊಳಗಾದ ಯುವಕರು ಕುಡಿದ ಮತ್ತಿನಲ್ಲಿದ್ದು ತಮ್ಮ ಮೇಲೆ ಹಲ್ಲೆ ನಡೆಸಿದರಿಂದ ಅನಿವಾರ್ಯವಾಗಿ ತಾವು ಬಲಪ್ರಯೋಗ ಮಾಡಬೇಕಾಯಿತು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಆದರೆ ತಮ್ಮ ವಾದವನ್ನು ನ್ಯಾಯಾಲಯದಲ್ಲಿ ಸಮರ್ಥಿಸಲು ಬೇಕಾದ ಅತಿಮುಖ್ಯವಾದ ಸಾಕ್ಷಿಯಾಗಿದ್ದ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ವಿಫಲರಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ. ಅನಂತರ ಕಾರವಾರದ ಸಿಪಿಐ ಅವರು ಈ ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರಾದರೂ ಅದರಲ್ಲಿ ಯುವಕರು ಕುಡಿದ ಮತ್ತಿನಲ್ಲಿದ್ದರು ಎಂಬ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಗಳಿಸಿಕೊಳ್ಳಲು ವಿಫಲರಾಗಿದ್ದಾರೆ.  ಈ ಮಧ್ಯ ಪ್ರಧಾನಿಮಂತ್ರಿಗಳ ಕಾರ್ಯಾಲಯದಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬಂದಿದ್ದು ಈ ಬಗ್ಗೆ ಕ್ರಮಕೈಗೊಂಡು ಅದರನ್ನು ಪ್ರಧಾನಮಂತ್ರಿಗಳ ದೂರು ವಿಭಾಗದ ವೆಬ್ ಸೈಟಿನಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಹಲ್ಲೆ ಪ್ರಕರಣದ ಆರೋಪಿಗಳಾದ ಪೆÇಲೀಸರಿಗೆ ಮತ್ತಷ್ಟು ಸಂಕಷ್ಟ ಕಾಡುವ ಸೂಚನೆಗಳು ಕಂಡುಬಂದಿವೆ.