ಬಂದ್ಯೋಡ್ ವ್ಯಾಪಾರಿ ಕೊಲೆ ಪ್ರಕರಣ : 4 ಆರೋಪಿಗಳು ಮತ್ತೆ ಪೆÇಲೀಸ್ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಂದ್ಯೋಡ್ ಕಯ್ಯಾರು ಮುಂಡೆಕಾಪುವಿನ ಜೆ ಕೆ ಸ್ಟೋರ್ ಮಾಲಕ ರಾಮಕೃಷ್ಣ ಮೂಲ್ಯರನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ 4 ಮಂದಿ ಆರೋಪಿಗಳನ್ನು ಕುಂಬಳೆ ಪೆÇಲೀಸರು 5 ದಿವಸಕ್ಕೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಚೆಂಗಳ ಎಡನೀರು ಚೂರಿ ಮೂಲೆಮನೆಯ ಬಿ ಎಂ ಉಮ್ಮರ್ ಫಾರೂಕ್, ಪೂವ್ವಲ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನೌಶಾದ್ ಶೇಖ್, ಭೋವಿಕ್ಕಾನ 8ನೇ ಮೈಲಿನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆರಿಫ್ ಎಂಬ ಅಚ್ಚು, ಚೆಂಗಳ ರಹ್ಮತನಗರ ನಿವಾಸಿ ಕೆ ಅಶ್ರಫ್  ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ತನಕ ಕೊಲೆ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಪತ್ತೆ ಹಚ್ಚದ ಕಾರಣ ವಶಕ್ಕೆ ಪಡೆದ ಆರೋಪಿಗಳಿಂದ ಆಯುಧಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲು ಪೆÇಲೀಸರು ನಿರ್ಧರಿಸಿದ್ದಾರೆ. ಮೇ 4ರಂದು ಸಂಜೆ ವ್ಯಾಪಾರಿ ರಾಮಕೃಷ್ಣ ಮೂಲ್ಯರನ್ನು ಕಡಿದು ಬರ್ಬರವಾಗಿ ಕೊಲೆಗೈಯಲಾಗಿತ್ತು. ಬಳಿಕ ಆರೋಪಿಗಳು ಸಂಚರಿಸಿದ ಕಾರನ್ನು ದೇರಳಕಟ್ಟೆಯಿಂದ ವಶಪಡಿಸಿಕೊಳ್ಳಲಾಗಿತ್ತು.