ಬ್ಯಾಂಕಿಗೆ ವಂಚಿಸಿದ ಮೂವರು 3 ದಿನ ಪೊಲೀಸ್ ಕಸ್ಟಡಿಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಯೆಯ್ಯಾಡಿ ಆ್ಯಕ್ಸಿಸ್ ಬ್ಯಾಂಕ್‍ಗೆ 7.5 ಕೋಟಿ ರೂ ವಂಚನೆ ನಡೆಸಿ ಪರಾರಿಯಾಗಿ ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಆರೋಪಿಗಳಾದ ಚಿತ್ರದುರ್ಗದ ಕರಿಬಸಪ್ಪ, ಗನ್ ಮ್ಯಾನ್ ಕೊಡಗಿನ ಪೂವಪ್ಪ, ಕೊಡಗಿನ ಕಾರಿಯಪ್ಪ ಯಾನೆ ಕಾಶಿಗೆ ಜೆಎಂಎಫ್ಸಿ 3ನೇ ನ್ಯಾಯಾಲಯ 3 ದಿನ ಪೊಲೀಸ್ ಕಸ್ಟಡಿ ವಿಧಿಸಿದೆ.

ಮೇ 11ರಂದು ಎಸ್ಸೈಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಗೆ ಸೇರಿದ ಬೊಲೆರೋ ವಾಹನದಲ್ಲಿ ಆರೋಪಿಗಳು ಬೆಂಗಳೂರಿನ ಕೋರಮಂಗಲದಲ್ಲಿರುವ ಬ್ಯಾಂಕಿಗೆ ಹಣವನ್ನು ತಲುಪಿಸುವ ಬದಲು ವಂಚನೆ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡ ಮೇರೆಗೆ ಇದೀಗ 3 ದಿನ ಕಸ್ಟಡಿಗೆ ನೀಡಲಾಗಿದೆ.