ಪೆರ್ಲದಲ್ಲಿ ಪೋಲಿಸ್ ಪೋಸ್ಟಿಗೆ ಚಾಲನೆ

ಶಾಸಕ ಅಬ್ದುಲ್ ರಝಾಕ್ ಪೋಲಿಸ್ ಏಯ್ಡ್ ಪೋಸ್ಟ್ ಉದ್ಘಾಟಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆರ್ಲದಲ್ಲಿ ಪೋಲಿಸ್ ಇಲಾಖೆ ನೂತನವಾಗಿ ನಿರ್ಮಿಸಿದ ಏಯ್ಡ್ ಪೋಸ್ಟಿಗೆ ಚಾಲನೆ ನೀಡಲಾಯಿತು.

ನೂತನ ಏಯ್ಡ್ ಪೋಸ್ಟನ್ನು ಶಾಸಕ ಪಿ ಬಿ ಅಬ್ದುಲ್ ರಝಾಕ್ ಉದ್ಘಾಟಿಸಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಏಯ್ಡ್ ಪೋಸ್ಟಿನಲ್ಲಿ ಕನಿಷ್ಟ ಒಬ್ಬ ಅಧಿಕಾರಿ 24 ಗಂಟೆಯೂ ಕಾರ್ಯಾಚರಿಸುವರು. ಪೆರ್ಲ ಪೇಟೆ ಮತ್ತು ಪರಿಸರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಏಯ್ಡ್ ಪೋಸ್ಟ್ ಸ್ಥಾಪಿಸಲಾಗಿದೆ.