ಕವನದಲ್ಲೇ ವಾಸ್ತವ ಬಿಚ್ಚಿಟ್ಟ ಕವಿಗಳು

ವೇದಿಕೆಯಲ್ಲಿ ಅನೇಕ ಕವಿಗಳು ಕವನ ವಾಚಿಸಿದರು

ಮಂಗಳೂರು : ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಆಯೋಜಿಸಿರುವ ಜನನುಡಿ-2016 ಸಮಾವೇಶದ ಎರಡನೇ ದಿನ ಭಾನುವಾರ ಕವಿಗೋಷ್ಠಿಯಲ್ಲಿ ಸಚಿನ್ ಅಂಕೋಲ ಅವರು ಹಿಂದೆ ಮತ್ತು ಮುಂದೆ ಎಂಬ ಶೀರ್ಷಿಕೆಯ ಈ ಕವನ ವಾಚಿಸಿದಾಗ ಚಪ್ಪಾಳೆಯ ಸುರಿಮಳೆಯಾಗಿತ್ತು.

ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕವಿಗಳು ವರ್ತಮಾನದ ಸ್ಥಿತಿಗತಿಗಳನ್ನೇ ವಿಶ್ಲೇಷಿಸಿದ್ದು ವಿಶೇಷ.

ವಾಸುದೇವ ನಾಡಿಗ್ ಅವರು `ಕವಿತೆಯೊಂದರ ಮರಣೋತ್ತರ ಪರೀಕ್ಷೆ’ ಕವನವನ್ನು ಮುಗಿಸುವಾಗ “ಇನ್ನು ಬರೆಯಲಾಗುತ್ತಿಲ್ಲ, ಸೋತ ಕವಿತೆಯೊಂದರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ” ಎನ್ನುತ್ತಾ ಕವಿತೆ ಬರೆಯಲಾಗದ, ಗೆದ್ದ ಕವಿತೆಗಳ ಪೆÇಳ್ಳುತನಗಳನ್ನು ವಿಶ್ಲೇಷಿಸಿದರು. `ಕತ್ತರಿಸಿಟ್ಟ ಮರದ ಬೊಡ್ಡೆಯ ಮೇಲೆ ನಾಳಿನ ಭವಿಷ್ಯ ಬರೆಯಲು ನೂಕುನುಗ್ಗಲು’ ಎಂದರು.

ರಮೇಶ್ ಅರೋಲಿ ಅವರು ತಮ್ಮ ಕವನವನ್ನು ಹಾಡುತ್ತಾ `ಮೇಕೆಗೆ ಮೇವಿಲ್ಲ, ಮೇಕಿಂಗ್ ಇಂಡಿಯಾ’ ಎಂದು ರಾಜಕೀಯ ವಿಡಂಬನಾತ್ಮಕ ಸ್ಥಿತಿಯನ್ನು ಹೇಳಿದರು.

ಹೇಮಲತಾ ಮೂರ್ತಿ ಅವರು, `ಅಂತರಂಗದ ಅಳಲಿಗೆ ಕಣ್ಣು ಕಿವಿ ಮುಚ್ಚಿ ಕುಳಿತ’ ಸ್ಥಿತಿಯನ್ನು ಬಿಂಬಿಸಿದರು.

ಪ್ರದೀಪ್ ಮಾಲ್ಗುಡಿ ಅವರು `ಮಾಧ್ಯಮ ಉದ್ಯಮ’ ಕವಿತೆಯಲ್ಲಿ ಮಾಧ್ಯಮ ಕ್ಷೇತ್ರದ ಕೆಲವರ ನೈತಿಕತೆಯನ್ನು ಪ್ರಶ್ನಿಸುವಂತೆ “ಕೊಟ್ಟದ್ದು ಯಾರೋ, ಆದರೆ ಪಡೆದಿದ್ದು ನಾನೇ, ಈಗ ಕೈಸೋತು ಬರೆಯಲಾಗುತ್ತಿಲ್ಲ” ಎಂದರು.

ಯಂಶ ಬೆಂಗಿಲ ಅವರು “ಅಪ್ಪ ಮತ್ತು ವಾಸು’ ಎಂಬ ಕವನದಲ್ಲಿ ಸಮಾಜದಲ್ಲಿನ ತಾರತಮ್ಯ-ಧ್ವೇಷವನ್ನು ತೆರೆದಿಡುತ್ತಾ ಕರಾವಳಿ ಸಾಗುತ್ತಿರುವ ದಿಕ್ಕಿನತ್ತ ಬೆಳಕು ಚೆಲ್ಲಿದರು.

ಕಾವ್ಯಶ್ರೀ ಎಚ್ ಅವರು, “ಕ್ಷಮಿಸಿಬಿಡು ವೇಮುಲ ಸಹಿಸುವುದನ್ನು ಕಲಿಯುತ್ತಾ ಕಲಿಯುತ್ತಾ ನಾನು ಅಸಹನೆಯನ್ನು ಅಡವಿಟ್ಟಿದ್ದೇನೆ, ಬೀದಿಗಿಳಿಯಲಾರೆ” ಎಂದರು.

ವೀರಪ್ಪ ತಾಳದವರ್ ಅವರು, `ತಲೆ ಚಿಟ್….ಹಿಡಿದದ’ ಕವನ ವಾಚಿಸುತ್ತಾ, “ನನಗಿಗ ತಲಿ ಚಿಟ್ ಹಿಡಿದದ! ದಿನಕ್ಕೊಂದು ಕಾಯ್ದೆ ಜಾರಿ ಕಂಡು ದೇಶ ಆಳೋರ್ದ ನೀತಿ ಕಂಡು ತಲಿ ಕೆಟ್ಟಂಗ ಆಗೆದ ನನಗಿಗ ನೋಡಿ ಎತ್ಲಾಗರ ಓಡಿ ಹೋಗುವಂಗ ಆಗೆದ” ಎನ್ನುತ್ತಾ ಪ್ರಸ್ತುತ ಭಾರತದ ಪರಿಸ್ಥಿತಿ ತೆರೆದಿಟ್ಟರು.

ದೀಪಾ ಗಿರೀಶ್ ಅವರು, “ಅವರು ನಿಮ್ಮನ್ನು ಒದ್ದ ಕಾಲಿಗೆ ಹುಟ್ಟಿದ ಕೂಸು ನಾನು” ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.

ಚಾಂದಿನಿ ಅವರು, `ನಾನು ಅವಳಾಗಲು ಹೋದಾಗ ಆದ ಅನುಭವಗಳನ್ನು ಹಂಚಿಕೊಂಡರು.

ಸೈಫ್ ಜಾನ್ಸೆ ಕೊಟ್ಟೂರು, “ಕಡಲ ಚೂರುಗಳು ಜೋಳಿಗೆಗೆ ತುಂಬಿ ಊರ ಹಬ್ಬಿದ್ದು, ನೀರಡಿಸಿದೆ ಕರಾವಳಿಗೆ” ಎಂದರು.


ಅಭಿವೃದ್ಧಿ ಎಂಬುದು ಪೆÇೀಷಾಕು :ಮೂಡ್ನಾಕೂಡು ಚಿನ್ನಸ್ವಾಮಿ

ಅಭಿವೃದ್ಧಿ ಎಂಬುದು ಒಂದು ಪೆÇೀಷಾಕು ಆಗಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸಾಂಸ್ಕತಿಕ ಯಜಮಾನಿಕೆಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಅವರಿಂದ (ಸಂಘ ಪರಿವಾರ) ನಡೆಯುತ್ತಿದೆ” ಎಂದು ವಿಶ್ಲೇಷಿಸಿದರು.

“ಇಂದು ಪ್ರಜಾಪ್ರಭುತ್ವ ಅನೀಮಿಕ್ ಆಗಿದೆ. ಶಕ್ತಿ ಸಂಚಾರ ಕಡಿಮೆ ಆಗಿದೆ. ಯಾವಾಗ ಕೋಮಾಕ್ಕೆ ಹೋಗುತ್ತದೆಯೋ ಗೊತ್ತಿಲ್ಲ” ಎನ್ನುತ್ತಾ ಪ್ರಸ್ತುತ ಪರಿಸ್ಥಿತಿಯನ್ನು ಬಿಡಿಸಿಟ್ಟರು.

“ಜಾತಿ ಎನ್ನುವುದು ಒಂದು ಕ್ಯಾನ್ಸರ್. ಜಾತಿ ವಿನಾಶ ಆಗದೇ ನಮ್ಮ ದೇಶ ಅಭಿವೃದ್ಧಿ ಆಗದು” ಎಂದರು. ನಂತರ ಅವರು ತಮ್ಮ ಎರಡು ಕವನಗಳನ್ನು ವಾಚಿಸಿದರು.