ಧರ್ಮಸ್ಥಳ ಪೋಕ್ಸೋ ಆರೋಪಿ ರಿಜೇಶ್ ಕೇರಳದಲ್ಲಿ ಬಂಧನ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಮುಂಡೂರು ನಿವಾಸಿಯಾದ್ದು ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಿಜೇಶ್ (27) ಎಂಬಾತನನ್ನು ಧರ್ಮಸ್ಥಳ ಪೊಲೀಸರು ಕೇರಳದ ಆಳಾವದಲ್ಲಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದ ಕ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಂಡವೊಂದನ್ನು ರಚಿಸಿ ವೃತ್ತನಿರೀಕ್ಷಕರ ಸಹಾಯದೊಂದಿಗೆ  ಧರ್ಮಸ್ಥಳ ಠಾಣಾ ಎಸ್ ಐ ಅವಿನಾಶ್ ಮತ್ತು ಸಿಬ್ಬಂದಿ ತಂಡ

ಕಾರ್ಯಚರಣೆಯೊಂದರಲ್ಲಿ ಪೋಕ್ಸೋ ಪ್ರಕರಣದ ಆರೋಪಿ ರಿಜೇಶ್‍ನನ್ನು ಕೇರಳದಲ್ಲಿ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ  15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY