ಪ್ರಧಾನಮಂತ್ರಿ ಮೌನ ವಹಿಸಿದ್ದು ಸರಿಯಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 4ರಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭ ಮಹದಾಯಿ ವಿಚಾರವಾಗಿ ಚಕಾರವೆತ್ತಲಿಲ್ಲ ಅಂದು ತಮ್ಮ ಪಕ್ಷದ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರಿಂದ ಈ ವಿಷಯ ಪ್ರಸ್ತಾಪಿಸಲಿಲ್ಲ ಎಂದುಕೊಳ್ಳಬಹುದು ಆದರೆ ಫೆಬ್ರವರಿ 6ರಂದು ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಜ್ಯದ ಸಂಸದರು ಲೋಕಸಭೆಯಲ್ಲಿ ಜಟಾಪಟಿ ನಡೆಸಿದಾಗಲೂ ಪ್ರಧಾನಿ ಮೌನ ವಹಿಸಿದ್ದು ಸರಿಯಲ್ಲ ಪ್ರಧಾನಿ ಸಮ್ಮುಖದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಈ ವಿಷಯದ ಬಗ್ಗೆ ಆರೋಪ ಪ್ರತ್ಯಾರೋಪ ನಡೆಸಿದಾಗ ಅವರು ಮಧ್ಯಪ್ರವೇಶಿಸಿ ಮಹದಾಯಿ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬಹುದಿತ್ತು ದೇಶದ ಒಕ್ಕೂಟ ವ್ಯವಸ್ಥೆ ಸಂರಕ್ಷಕರಾದ ಪ್ರಧಾನಿ ಈಗಲಾದರೂ ಜವಾಬ್ದಾರಿ ನಡೆ ಪ್ರದರ್ಶಿಸಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಮುಂದಾಗಬಾರದೇಕೆ

  • ಕೆ ನಾರಾಯಣ ಕೋಟ್ಯಾನ್  ಕೊಪ್ಪಲಂಗಡಿ

LEAVE A REPLY