ಕಾಳಧನಿಕರಿಗೆ ಪ್ರಧಾನಿ ಮಾಸ್ಟರ್ ಸ್ಟ್ರೋಕ್

ನಮ್ಮ ಪ್ರಧಾನಮಂತ್ರಿ ಮೋದಿ ದಿಟ್ಟ ಹೆಜ್ಜೆಯಿಂದ ಕಾಳಧನಿಕರು  ದೇಶದ್ರೋಹಿಗಳು ಹಾಗೂ ಭಯೋತ್ಪಾದಕರು ದಿಕ್ಕು ಪಾಲಾಗಿ ಓಡುವಂತಹ ಸ್ಥಿತಿ ನಿರ್ಮಾಣವಾಗಿದೆ  ಇಂತಹ ಬೆಳವಣಿಗೆ ಹಿಂದೆಯೂ ನಿರ್ಮಾಣವಾಗಿಲ್ಲ  ನಮ್ಮಂತಹ ಮಧ್ಯಮ ವರ್ಗದವರು  ಬಡವರಿಗೆ ಸ್ವಲ್ಪ ತೊಂದರೆಯಾದರೂ ಪರವಾಗಿಲ್ಲ  ಸ್ವಲ್ಪ ದಿವಸದ ಬಳಿಕ ಎಲ್ಲವೂ ಸರಿ ಹೋಗುವುದು  ಆದರೆ ದೊಡ್ಡ ದೊಡ್ಡ ಕುಳಗಳು ಇದರಿಂದ ತಪ್ಪಿಸಿ ಕೊಳ್ಳುವಂತಿಲ್ಲ  ಇದು ಖಂಡಿತ ಸತ್ಯ
ರಾಹುಲ್ ಗಾಂಧಿ  ಮುಲಾಯಂ  ಕೇಜ್ರಿವಾಲನಂಥವರಿಗೆ ಏಕೆ ಭಯವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ  ಇಂಥವರಿಂದಲೇ ಈ ದೇಶದ ಅಭಿವೃದ್ಧಿಗೆ ಅಡ್ಡಗಾಲು  ದೇಶದ ಬಡವರು  ಮಧ್ಯಮ ವರ್ಗದ ಜನ ಈ ಬೆಳವಣಿಗೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ  ನಮ್ಮ ದೇಶದ ನಕಲಿ ಕರೆನ್ಸಿಗಳನ್ನು ಪಾಕಿಸ್ಥಾನದಲ್ಲಿ ಮುದ್ರಿಸಿ ಭಯೋತ್ಪಾದಕರಿಗೆ ರಾಜಾರೋಷವಾಗಿ ಹಂಚುತ್ತಿದ್ದಾರೆ  ಇದು ನೋಟು ನಿಷೇಧ ವಿರೋಧಿಸುವ ರಾಜಕಾರಣಗಳ ಕಣ್ಣಿಗೆ ಕಾಣದಿರುವುದು ಖೇದಕರ ಸಂಗತಿ  ನಮ್ಮನ್ನು ಇಷ್ಟು ವರ್ಷ ಆಳ್ವಿಕೆ ಮಾಡಿರುವವರು ದೇಶಕ್ಕೆ ಮಸಿ ಬಳಿದಿದ್ದಾರೆ  ಆದರೆ ನಮ್ಮ ದಿಟ್ಟ ಪ್ರಧಾನಿ ಬಳಿದ ಮಸಿಯನ್ನು ಸ್ವಚ್ಛ ಮಾಡುವ ಮೂಲಕ ದೇಶದೆಲ್ಲೆಡೆ ಸ್ವಚ್ಛ ಭಾರತ ಕರೆನ್ಸಿ ಅಭಿಯಾನ ಕೈಗೊಂಡಿದ್ದಾರೆ ಭಾರತೀಯರೆಲ್ಲರೂ ನೋಟು ಬದಲಾವಣೆಗೆ ಉತ್ತಮವಾಗಿ ಸ್ಪಂದಿಸುವಾಗ ಕೆಲ ರಾಜಕಾರಣಿಗಳು ಯಾಕಿಷ್ಟು ಗಾಬರಿಪಡುತ್ತಿದ್ದಾರೆಂಬುದೇ ತಿಳಿಯುತ್ತಿಲ್ಲ  ಇದರರ್ಥ ಅವರ ಹತ್ತಿರ ಬೇಕಾದಷ್ಟು ಕೊಳ್ಳೆ ಹೊಡೆದ ಕಪ್ಪು ಹಣ ಇರಬಹುದು ಎಂದರ್ಥವಲ್ಲವೇ

  • ವಿಶಾಲ್  ಕುಳಾಯಿ ಮಂಗಳೂರು