ಪ್ರಧಾನಿ ಡಿಗ್ರಿ ವಿವಾದ : ವಾರ್ಸಿಟಿ ದಾಖಲೆಗಳ ಪರಿಶೀಲನೆಗೆ ಅನುಮತಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿಎ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆನ್ನಲಾದ ವರ್ಷವಾದ 1978ರಲ್ಲಿ ವಿಶ್ವವಿದ್ಯಾಲಯ ನಡೆಸಿದ ಬಿ ಎ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳನ್ನು  ಪರಿಶೀಲಿಸಲು ಅನುಮತಿಸುವಂತೆ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶಿಸಿದೆ.

ಇದು ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯಾಗಿರುವುದರಿಂದ ಅದರ ಬಗ್ಗೆ ವಿವರ ಕೋರುವುದು ನ್ಯಾಯಸಮ್ಮತವಲ್ಲ ಎಂದು ವಿಶ್ವವಿದ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಾದವನ್ನು ಆಯೋಗ ತಿರಸ್ಕರಿಸಿದೆ.

ನೀರಜ್ ಎಂಬವರು ಆರ್ಟಿಐ ಅರ್ಜಿ ದಾಖಲಿಸಿ ಪ್ರಧಾನಿ ಪದವಿ ಬಗ್ಗೆ ಮಾಹಿತಿ ಕೋರಿದ್ದರು.