ಮುಲ್ಕಿ ಹೋಬಳಿ ಪಂಚಾಯತಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಹೋಬಳಿ ಕಂದಾಯ ಇಲಾಖೆ ಜಮಾಬಂದಿ ಕಾರ್ಯಕ್ರಮ ಬಪ್ಪನಾಡಿನಲ್ಲಿ ನಡೆಯಿತು.

ಹುಜೂರು ಜಮಾಬಂದಿ ಅಧಿಕಾರಿ ರೇಣುಕಾಪ್ರಸಾದ, ಗ್ರಾಮಸ್ಥರ ಕಡತಗಳನ್ನು ತ್ವರಿತವಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮುಲ್ಕಿ ಹೋಬಳಿಯ 12 ವೃತ್ತಗಳಲ್ಲಿ 6 ಕಡೆ ಗ್ರಾಮಲೆಕ್ಕಿಗ ಸಿಬ್ಬಂದಿ ಕೊರತೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು, ಮುಲ್ಕಿ ಹೋಬಳಿಯ ಪಂಚಾಯತಿ ವ್ಯಾಪ್ತಿಯಲ್ಲಿ ತಲೆದೋರಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು ಎಂದರು.

ಮುಲ್ಕಿ ವಿಶೇಷ ತಹಶೀಲ್ದಾರ ಕಿಶೋರಕುಮಾರ್ ಉಪತಹಶೀಲ್ದಾರ ನಿತ್ಯಾನಂದದಾಸ್, ಸಿಬ್ಬಂದಿಗಳ ಕೊರತೆ ಹಾಗೂ ಪಂಚಾಯತಿಯ ಮೂಲಬೂತ ಸೌಕರ್ಯಗಳ ಅವ್ಯವಸ್ಥೆ ಬಗ್ಗೆ ಆಯುಕ್ತರ ಗಮನ ಸೆಳೆದರು. ಇದಕ್ಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದರು.