ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ಸರಿಪಡಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ಕೂಡಲೇ ಸರಿಪಡಿಸಬೇಕು ಎಂದು ಸಿಪಿಐಎಂ ಎಣ್ಮಕಜೆ ಲೋಕಲ್ ಸಮ್ಮೇಳನವು ಒತ್ತಾಯಿಸಿದೆ. ನಲ್ಕ ಗೋವಿಂದ ನಾಯ್ಕ್ ನಗರದಲ್ಲಿ ನಡೆದ ಪ್ರತಿನಿಧಿ ಸಮ್ಮೇಳನವನ್ನು ಸಿಪಿಐಎಂ ಕಾಸರಗೋಡು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ನ್ಯಾಯವಾದಿ ಸಿ ಎಚ್ ಕುಂಞಂಬು ಚಾಲನೆ ನೀಡಿದರು. ಮರುದಿನ ನಡೆದ ಕೆಂಪು ಸಮವಸ್ತ್ರಧಾರಿಗಳ ಪಥಸಂಚಲನ ಮತ್ತು ಸ್ತ್ರೀಯರು ಮಕ್ಕಳನ್ನು ಒಳಗೊಂಡ ಬಹುಜನ ರ್ಯಾಲಿ ಇಡಿಯಡ್ಕ ದಿನೇಶ್ ಬೀಡಿ ಕಂಪೆನಿ ಪರಿಸರದಿಂದ ಪ್ರಾರಂಭವಾಗಿ ಪೆರ್ಲ ಕೆ ಪಿ ಮದನ ಮಾಸ್ಟರ್ ನಗರದಲ್ಲಿ ಸಮಾಪ್ತಿಗೊಂಡಿತು.