ಹೈಕೋರ್ಟ್ ಆವರಣದಿಂದ ಮನು ಪ್ರತಿಮೆ ತೆರವಿಗೆ ಆಗ್ರಹ

ಜೈಪುರ : ರಾಜಸ್ತಾನ ಹೈಕೋರ್ಟಿನ ಆವರಣದಲ್ಲಿರುವ ಮನು ಪ್ರತಿಮೆ ತೆಗೆದು ಹಾಕಬೇಕೆಂದು ಮನು ವಿರೋಧಿ ಗುಂಪಿನ ಕಾರ್ಯಕರ್ತರ ಗುಂಪೊಂದು ಆಗ್ರಹಿಸಿದೆ. ಈ ಗುಂಪಿನಲ್ಲಿ ಕೆಲವಾರು ವಕೀಲರೂ ಇದ್ದಾರೆ.

“ಮನುಸ್ಮøತಿ ಮಹಿಳಾ ವಿರೋಧಿ ಮತ್ತು ದಲಿತ ವಿರೋಧಿಯಾಗಿದೆ. ಆದ್ದರಿಂದ ಇಂತಹ ಪ್ರತಿಮೆಗಳ ಅನಾವರಣಕ್ಕೆ ಇಲ್ಲಿ ಅವಕಾಶ ನೀಡಬಾರದು” ಎಂದು ವಕೀಲ ಪ್ರೇಮಕೃಷ್ಣ ಶರ್ಮ ಹೇಳಿದರು.

ಪ್ರತಿಭಟನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಲಿತ ಕಾರ್ಯಕರ್ತರೂ ಪಾಲ್ಗೊಂಡಿದ್ದರು. “ಹೈಕೋರ್ಟ್ ಆವರಣದಲ್ಲಿ ಮನು ಪ್ರತಿಮೆ ಅನಾವರಣಗೊಳಿಸುವ ಅಗತ್ಯವಿಲ್ಲ. ಅದನ್ನು ತಕ್ಷಣ ತೆರವುಗೊಳಿಸಬೇಕು” ಎಂದಿರುವ ಪ್ರತಿಭಟನಾಕಾರರು, ರಾಜಸ್ತಾನ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿಯಾಗಿ ತಮ್ಮ ಬೇಡಿಕೆ ಮುಂದಿಡಲು ನಿರ್ಧರಿಸಿದ್ದಾರೆ. ಮನುಸ್ಮøತಿ ಪ್ರಾಚೀನ ಕಾನೂನು ಪಠ್ಯವಾಗಿದೆ.