ಟ್ರೇನ್ ಸಮಯ ನಿಗದಿಗೆ ಮನವಿ

ಪುತ್ತೂರು : ಪ್ರತಿದಿನ ಸಂಜೆ ಮಂಗಳೂರಿನಿಂದ ಪುತ್ತೂರಿಗೆ ಹೊರಡುವ ಪ್ಯಾಸೆಂಜರ್ (56645) ರೈಲಿನ ಸಮಯವನ್ನು ಸಂಜೆ 6.25ರ ಬದಲಾಗಿ 2016 ಅಕ್ಟೋಬರ್ ಒಂದರಿಂದ ಅನ್ವಯಿಸುವಂತೆ 6.10ಕ್ಕೆ ನಿಗದಿಪಡಿಸಿರುವುದರಿಂದ ಬಹುತೇಕ ನಿತ್ಯ ಪ್ರಯಾಣಿಕರಿಗೆ ಹಾಗೂ ಇತರರಿಗೆ ಅನಾನುಕೂಲ ಮತ್ತು ಈ ರೈಲು ಬೇಗನೆ ಹೊರಟು ಬಿ ಸಿ ರೋಡಿನಲ್ಲಿ ಸಮಾರು 8 ನಿಮಿಷಗಳ ಕಾಲ ಅನಗತ್ಯ ನಿಲುಗಡೆಯಾಗುತ್ತಿರುವುದಕ್ಕಾಗಿ ಈ ರೈಲಿನ ಹೊರಡುವ ಸಮಯವನ್ನು ಮೊದಲಿನ ಸಮಯಕ್ಕೇ ನಿಗದಿಪಡಿಸುವಂತೆ ಮತ್ತು ಬೆಳಗಿನ ರೈಲು (56642) ಪುತ್ತೂರಿನಿಂದ ಹೊರಟು ಮಂಗಳೂರು ಕೇಂದ್ರ ರೈಲು ನಿಲ್ದಾಣದ ಸಿಗ್ನಲ್ ಹೊರಗೆ 15 ನಿಮಿಷ ತಂಗುವುದನ್ನು ಕಡಿತ ಮಾಡುವಂತೆ ಮಂಗಳೂರು ಸಂಸದ ನಳಿನಕುಮಾರರಿಗೆ ಸಂಘಟನೆಯ ಸಂಚಾಲಕ ಸುದರ್ಶನ್ ಪುತ್ತೂರುರವರು ಸುಮಾರು 200 ಸಹಿಗಳ್ಳುಳ ಮನವಿಯನ್ನು ನೀಡಿದರು. ಸಂಸದರು ಪ್ರತಿಕ್ರಿಯಿಸುತ್ತ, ಇದನ್ನು ರೈಲ್ವೇ ಸಚಿವರ ದೆಹಲಿ ಕಚೇರಿಯ ಮೂಲಕ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಮಾರ್ಗದರ್ಶನ ನೀಡುವ ಭರವಸೆ ನೀಡಿದರು.